ವಿರಾಟ್ ಕೊಹ್ಲಿ
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನಲ್ಲಿ ಗೆದ್ದು ಆಟಗಾರರು ಭಾರತಕ್ಕೆ ಮರಳಿದ್ದು, ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಐಪಿಎಲ್‌ಗೆ ತಯಾರಾಗುತ್ತಿರುವ ವಿರಾಟ್ ಕೊಹ್ಲಿ ಹೊಸ ಹೇರ್‌ಲುಕ್ ಮಾಡಿಸಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಕೇಶ ವಿನ್ಯಾಸಕಾರ ಆಲಿಮ್ ಹಕೀಮ್, ವಿರಾಟ್ ಕೊಹ್ಲಿಯ ಹೊಸ ಹೇರ್ ಕಟ್ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಪ್ಶನ್‌ನಲ್ಲಿ ‘ಸರ್ವಕಾಲಿಕ ಶ್ರೇಷ್ಠ ಶಕ್ತಿ!, ವಿರಾಟ್ ಕೊಹ್ಲಿಗಾಗಿ ಫ್ರೆಶ್ ಸ್ನಿಪ್’ ಎಂದು ಬರೆದುಕೊಂಡಿದ್ದಾರೆ.
ತಲೆಯ ಎರಡೂ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿ ಸಣ್ಣದಾಗಿ ಟ್ರಿಮ್ ಮಾಡಲಾಗಿದ್ದು, ‘ರೇಜರ್ ಶಾರ್ಪ್’ ಹೇರ್‌ಕಟ್‌ನಲ್ಲಿ ಕೊಹ್ಲಿ ಮಿಂಚಿದ್ದಾರೆ.
ಕೊಹ್ಲಿ ಅವರ ಫೋಟೊಗಳಿಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ವಿರಾಟ್ ಕೊಹ್ಲಿ ಹ್ಯಾಂಡ್‌ಸಮ್ ವ್ಯಕ್ತಿ ಎಂದಿದ್ದಾರೆ‘. ‘ಇನ್ನೊಬ್ಬರು, ಕಿಂಗ್ ಕೊಹ್ಲಿ ಲವ್ ಫ್ರಮ್ ಪಾಕಿಸ್ತಾನ’ ಎಂದಿದ್ದಾರೆ.
ಮತ್ತೊಬ್ಬ ಅಭಿಮಾನಿ, ‘ಬಾಲಿವುಡ್ ನಟರಿಗೆ ಕ್ರಿಕೆಟ್ ಆಟಗಾರರು ಸ್ಪರ್ಧೆ ನೀಡುತ್ತಿದ್ದಾರೆ. ಬಾಲಿವುಡ್ ನಟರಿಗಿಂತ ಕಿಂಗ್ ಕೊಹ್ಲಿ 100 ಪಟ್ಟು ಹ್ಯಾಂಡ್‌ಸಮ್’ ಎನ್ನುವ ಅರ್ಥದಲ್ಲಿ ಕಮೆಂಟ್ ಮಾಡಿದ್ದಾರೆ.
ಇನ್ನೇನು ಐಪಿಎಲ್ 2025 ಆರಂಭವಾಗಲು ಒಂದು ವಾರವಷ್ಟೇ ಬಾಕಿಯಿದೆ. ಆರ್‌ಸಿಬಿ ತಂಡದ ನಾಯಕನ ಸ್ಥಾನದಿಂದ ಹೊರಗಿರುವ ವಿರಾಟ್ ಕೊಹ್ಲಿ ಆಟದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.