ADVERTISEMENT

ಹೊಸ ಕೇಶ ವಿನ್ಯಾಸ; ನವ ಹುಮ್ಮಸ್ಸು

ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಭಾರತ ಕ್ರಿಕೆಟ್ ತಂಡ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:00 IST
Last Updated 20 ಜೂನ್ 2019, 20:00 IST
ಲಂಡನ್‌ನಲ್ಲಿರುವ ಖ್ಯಾತ ಕೇಶವಿನ್ಯಾಸಕಾರ ಅಲೀಂ ಹಕೀಮ್ ಅವರು ಮಹೇಂದ್ರಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ ಅವರ ಕೇಶ ವಿನ್ಯಾಸ ಮಾಡಿದರು –ಟ್ವಿಟರ್ ಚಿತ್ರ
ಲಂಡನ್‌ನಲ್ಲಿರುವ ಖ್ಯಾತ ಕೇಶವಿನ್ಯಾಸಕಾರ ಅಲೀಂ ಹಕೀಮ್ ಅವರು ಮಹೇಂದ್ರಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ ಅವರ ಕೇಶ ವಿನ್ಯಾಸ ಮಾಡಿದರು –ಟ್ವಿಟರ್ ಚಿತ್ರ   

ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಗೆಲುವುಗಳನ್ನು ಸಾಧಿಸಿ ಸಂತಸದ ಅಲೆಯಲ್ಲಿ ತೇಲುತ್ತಿರುವ ಭಾರತ ತಂಡದ ಆಟಗಾರರು ಹೊಸ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ.

ಹೋದ ಭಾನುವಾರ ಪಾಕಿಸ್ತಾನ ತಂಡದ ಎದುರು ಜಯ ಸಾಧಿಸಿದ್ದ ವಿರಾಟ್ ಕೊಹ್ಲಿ ಬಳಗದ ಆಟಗಾರರು ಬುಧವಾರ ಇಲ್ಲಿಯ ಪ್ರಸಿದ್ಧ ಕೇಶವಿನ್ಯಾಸಕಾರ ಅಲೀಂ ಹಕೀಮ್ ಅವರಿಂದ ಹೊಸ ಕೇಶಶೈಲಿ ಮಾಡಿಸಿಕೊಂಡಿದ್ದಾರೆ.

ಸದಾ ಹೊಸ ಕೇಶಶೈಲಿಗಳನ್ನು ಮಾಡಿಸಿಕೊಳ್ಳುವ ಹವ್ಯಾಸವಿರುವ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ, ನಾಯಕ ವಿರಾಟ್ ಕೊಹ್ಲಿ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಹೊಸ ಬಗೆಯ ವಿನ್ಯಾಸದ ಹೇರ್‌ಕಟ್‌ಗಳನ್ನು ಮಾಡಿಸಿಕೊಂಡಿದ್ದಾರೆ.

ADVERTISEMENT

‘ಕ್ರಿಕೆಟ್ ದಿಗ್ಗಜ ಎಂ.ಎಸ್. ಧೋನಿ, ಆಲ್‌ರೌಂಡರ್‌ ಹಾರ್ದಿಕ್, ಯಜುವೇಂದ್ರ ಅವರ ಕೇಶವಿನ್ಯಾಸ ಮಾಡುವ ಅವಕಾಶ ಲಭಿಸಿದೆ’ ಎಂದು ಅಲೀಂ ಹಕೀಮ್ ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.

ಜೂನ್ 16ರಂದು ಪಾಕ್ ವಿರುದ್ಧ ತಂಡವು ಪಂದ್ಯವಾಡಿತ್ತು. ಅದರ ನಂತರ ಐದು ದಿನಗಳ ಬಿಡುವು ಇದೆ. ಶನಿವಾರ ಅಫ್ಗಾನಿಸ್ತಾನ ತಂಡದ ಎದುರು ತಂಡವು ಆಡಲಿದೆ. ಒಟ್ಟು ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಭಾರತವು ಜಯಿಸಿದೆ. ದಕ್ಷಿಣ ಆಫ್ರಿಕಾ, ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ಎದುರು ಅಮೋಘ ಜಯ ಸಾಧಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.