ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಚಾಹಲ್ ಕಿರಿಕಿರಿ: ಗೇಲ್ ಗರಂ

ಪಿಟಿಐ
Published 26 ಏಪ್ರಿಲ್ 2020, 19:30 IST
Last Updated 26 ಏಪ್ರಿಲ್ 2020, 19:30 IST
ಕ್ರಿಸ್ ಗೇಲ್
ಕ್ರಿಸ್ ಗೇಲ್   

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರು ಮಾಡುತ್ತಿರುವ ತಮಾಷೆಯ ಪ್ರಸಂಗಗಳು ಕಿರಿಕಿರಿಯುಂಟು ಮಾಡುತ್ತಿವೆ ವೆಸ್ಟ್‌ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.

ಚಾಹಲ್ ಅವರನ್ನು ತಮ್ಮ ಖಾತೆಗಳಲ್ಲಿ ಬ್ಲಾಕ್ ಮಾಡಿರುವುದಾಗಿಯೂ ಗೇಲ್ ಹೇಳಿದ್ದಾರೆ.

‘ಚಾಹಲ್ ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್‌ಗಳು ನನಗೆ ಕಿರಿಕಿರಿ ಉಂಟು ಮಾಡುತ್ತಿವೆ. ನಾನು ಟಿಕ್‌ಟಾಕ್‌ನವರಿಗೂ ಚಾಹಲ್ ಅಕೌಂಟ್ ರದ್ದುಗೊಳಿಸುವಂತೆ ಮನವಿ ಮಾಡಲಿದ್ದೇನೆ. ಈಗೀಂದಿಗಲೇ ಎಲ್ಲ ತಾಣಗಳಿಂದ ನಿಮ್ಮ ಖಾತೆಗಳನ್ನು ರದ್ದುಗೊಳಿಸಿಕೊಳ್ಳಿ’ ಎಂದು ಇನ್ಸ್ಟಾಗ್ರಾಮ್‌ ಲೈವ್‌ನಲ್ಲಿ ಗೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಈಚೆಗೆ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್‌ ಅವರೊಂದಿಗಿನ ಸಂವಾದದಲ್ಲಿ ಬಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಚಾಹಲ್ ವಿಡಿಯೊಗಳ ಬಗ್ಗೆ ಮಾತನಾಡಿದ್ದರು.

‘ಟಿಕ್‌ಟಾಕ್‌ನಲ್ಲಿ ಚಾಹಲ್ ವಿಡಿಯೊ ನೋಡಿ. ಶುದ್ಧ ಕೊಡಂಗಿಯಂತೆ ಆಡುತ್ತಾನೆ. 29 ವರ್ಷದ ಚಾಹಲ್, ಅಂತರರಾಷ್ಟ್ರೀಯ ಕ್ರಿಕೆಟಿಗ ಎಂಬುದನ್ನು ನಂಬಲಾಗುವುದಿಲ್ಲ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.