ADVERTISEMENT

ಕ್ರಿಕೆಟ್ ಸರಣಿ ಆತಿಥ್ಯಕ್ಕೆ ಪಾಕ್ ಸಜ್ಜು

ಏಜೆನ್ಸೀಸ್
Published 24 ಸೆಪ್ಟೆಂಬರ್ 2020, 19:30 IST
Last Updated 24 ಸೆಪ್ಟೆಂಬರ್ 2020, 19:30 IST
   

ಕರಾಚಿ: ಜಿಂಬಾಬ್ವೆ ವಿರುದ್ಧ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಜ್ಜಾಗಿದ್ದು ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಪಂದ್ಯಗಳು ನಡೆಯಲಿವೆ. ಈ ವಿಷಯವನ್ನು ಮಂಡಳಿ ಬುಧವಾರ ತಿಳಿಸಿದೆ.

ಮುಂದಿನ ತಿಂಗಳು ಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಬರಲಿದ್ದು ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಆಡಲಿದೆ. ‌ಕೋವಿಡ್–19 ಹಿನ್ನೆಲೆಯಲ್ಲಿ ಸರಣಿಗಳು ಬಯೊ ಸೆಕ್ಯೂರ್ ವ್ಯವಸ್ಥೆಯಡಿ ನಡೆಯಲಿವೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

10 ದಿನಗಳ ಕ್ವಾರಂಟೈನ್‌ ನಂತರ ಅಕ್ಟೋಬರ್ 30ರಂದು ಮೊದಲ ಏಕದಿನ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದೆ. ‍ನವೆಂಬರ್‌ 1 ಮತ್ತು 3ರಂದು ಇತರ ಎರಡು ಪಂದ್ಯಗಳು ನಡೆಯಲಿವೆ. ಟ್ವೆಂಟಿ–20 ಪಂದ್ಯಗಳು ನವೆಂಬರ್ 7, 8 ಮತ್ತು 10ರಂದು ರಾವಲ್ಪಿಂಡಿಯಲ್ಲಿ ನಡೆಯಲಿವೆ. ಪಂದ್ಯಗಳಿಗೆ ಪ್ರೇಕ್ಷರಿಗೆ ಪ್ರವೇಶ ಇರುವುದಿಲ್ಲ.

ADVERTISEMENT

ಪಾಕಿಸ್ತಾನದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಕಳೆದ ಕೆಲವು ತಿಂಗಳಿಂದ ಕಡಿಮೆಯಾಗುತ್ತಿದ್ದು ಲಾಕ್‌ಡೌನ್‌ ಹಿಂತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.