ADVERTISEMENT

Copa America | ಉರುಗ್ವೆ ನಿರ್ಗಮನ; ಅರ್ಜೆಂಟೀನಾ vs ಕೊಲಂಬಿಯಾ ಫೈನಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2024, 10:03 IST
Last Updated 11 ಜುಲೈ 2024, 10:03 IST
<div class="paragraphs"><p>ಅರ್ಜೆಂಟೀನಾ vs ಕೊಲಂಬಿಯಾ</p></div>

ಅರ್ಜೆಂಟೀನಾ vs ಕೊಲಂಬಿಯಾ

   

(ಚಿತ್ರ ಕೃಪೆ/@CopaAmerica)

ನಾರ್ತ್ ಕರೋಲಿನಾ: ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಉರುಗ್ವೆ ತಂಡವನ್ನು 1-0 ಗೋಲುಗಳಿಂದ ಮಣಿಸಿರುವ ಕೊಲಂಬಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

39ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಜೆಫರ್ಸನ್ ಲೆರ್ಮಾ, ಗೆಲುವಿನ ರೂವಾರಿ ಎನಿಸಿದರು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಕೊಲಂಬಿಯಾ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನಾದ ಸವಾಲನ್ನು ಎದುರಿಸಲಿದೆ.

ಮತ್ತೊಂದೆಡೆ ಕೆನಡಾ ತಂಡವನ್ನು ಮಣಿಸಿರುವ ಅರ್ಜೆಂಟೀನಾ ಈಗಾಗಲೇ ಫೈನಲ್‌ಗೆ ಪ್ರವೇಶಿಸಿದೆ.

2001ರಲ್ಲಿ ಚಾಂಪಿಯನ್ ಆಗಿದ್ದ ಕೊಲಂಬಿಯಾ...

ಕೊಪಾ ಅಮೆರಿಕ ಟೂರ್ನಿಯಲ್ಲಿ ಒಂದು ಸಲ ಮಾತ್ರ ಕೊಲಂಬಿಯಾ ಟ್ರೋಫಿ ಗೆದ್ದಿದೆ. 2001ರಲ್ಲಿ ಮೆಕ್ಸಿಕೊ ತಂಡವನ್ನು ಮಣಿಸಿದ್ದ ಕೊಲಂಬಿಯಾ ಪ್ರಶಸ್ತಿ ಗೆದ್ದಿತ್ತು.

ಈಗ 23 ವರ್ಷಗಳ ಬಳಿಕ ಮತ್ತೆ ಫೈನಲ್‌ಗೆ ಪ್ರವೇಶಿಸಿರುವ ಕೊಲಂಬಿಯಾ ಮತ್ತೆ ಕಿರೀಟದ ಮೇಲೆ ಕಣ್ಣಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.