ADVERTISEMENT

GOAT Tour: ಇಂದು ಮುಂಬೈ, ನಾಳೆ ದೆಹಲಿಗೆ ಮೆಸ್ಸಿ; ಕಾರ್ಯಕ್ರಮಗಳ ಪಟ್ಟಿ ಹೀಗಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2025, 4:58 IST
Last Updated 14 ಡಿಸೆಂಬರ್ 2025, 4:58 IST
<div class="paragraphs"><p>ಲಿಯೋನೆಲ್‌ ಮೆಸ್ಸಿ</p></div>

ಲಿಯೋನೆಲ್‌ ಮೆಸ್ಸಿ

   

ಫುಟ್‌ಬಾಲ್‌ ಲೋಕದ ಮಿನುಗು ತಾರೆ, ಅರ್ಜೆಂಟೀನಾದ 'ಸೂಪರ್‌ಸ್ಟಾರ್‌' ಲಿಯೋನೆಲ್‌ ಮೆಸ್ಸಿ ಅವರು ತಮ್ಮ 'GOAT Tour of India' ಪ್ರವಾಸದ ಎರಡನೇ ದಿನ ಮುಂಬೈಗೆ ಭೇಟಿ ನೀಡಲಿದ್ದಾರೆ.

ಮೊದಲ ದಿನ (ಡಿಸೆಂಬರ್ 13) ಕೋಲ್ಕತ್ತ ಹಾಗೂ ಹೈದರಾಬಾದ್‌ಗೆ ಭೇಟಿ ನೀಡಿದ್ದ ಮೆಸ್ಸಿ ಅವರೊಂದಿಗೆ, ಅರ್ಜೆಂಟೀನಾದವರೇ ಆದ ರೊಡ್ರಿಗೊ ಡಿ ಪೌಲ್‌ ಹಾಗೂ ಉರುಗ್ವೆಯ ಸೂಪರ್‌ಸ್ಟಾರ್‌ ಲೂಯಿಸ್‌ ಸೂರೆಜ್‌ ಅವರೂ ಇದ್ದಾರೆ.

ADVERTISEMENT

ಮುಂಬೈ ಹಾಗೂ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆನ್‌ಲೈನ್‌ ಮೂಲಕ ಟಿಕೆಟ್‌ ಖರೀದಿಸಲು ಅವಕಾಶವಿತ್ತು. ಟಿಕೆಟ್‌ ದರ ಕ್ರಮವಾಗಿ ₹ 7,080 ಹಾಗೂ ₹ 4,720 ನಿಗದಿಯಾಗಿತ್ತು. ಎಲ್ಲ ಟಿಕೆಟ್‌ಗಳು ಈಗಾಗಲೇ ಬಿಕರಿಯಾಗಿವೆ.

ನೇರಪ್ರಸಾರ ವೀಕ್ಷಿಸಿ
'GOAT Tour of India' ಪ್ರವಾಸದ ವೇಳೆ ಮೆಸ್ಸಿ ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳು ಪ್ರಸಾರ ಭಾರತಿ ಯುಟ್ಯೂಬ್‌ ಚಾನೆಲ್‌, Waves OTT appನಲ್ಲಿ ನೇರಪ್ರಸಾರ ಆಗಲಿವೆ. ಡಿಡಿ ಸ್ಟಾರ್‌ ವಾಹಿನಿಯಲ್ಲೂ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಕಾರ್ಯಕ್ರಮಗಳ ಪಟ್ಟಿ

ಮುಂಬೈ: ಡಿಸೆಂಬರ್‌ 14

  • ಪ್ಯಾಡೆಲ್‌ ಕಪ್‌: ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ (ಸಿಸಿಐ) ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ಆಯೋಜಿಸಿರುವ ಪ್ಯಾಡೆಲ್‌ ಕಪ್‌ ಪಂದ್ಯದಲ್ಲಿ ಮೆಸ್ಸಿ ಪಾಳ್ಗೊಳ್ಳಲಿದ್ದಾರೆ. ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್, ನಟ ಶಾರುಖ್‌ ಖಾನ್‌ ಅವರು ಭಾಗಿಯಾಗುವ ಸಾಧ್ಯತೆ ಇದೆ.

  • ಫುಟ್‌ಬಾಲ್‌ ಪಂದ್ಯ: ಬಾಲಿವುಡ್‌ ತಾರೆಯರೊಂದಿಗೆ ಸಂಜೆ 4ಕ್ಕೆ ನಿಗದಿಯಾಗಿರುವ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಮೆಸ್ಸಿ ಆಡಲಿದ್ದಾರೆ.

  • ಫ್ಯಾಷನ್ ಶೋ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಚಾರಿಟಿ ಫ್ಯಾಷನ್‌ ಶೋನಲ್ಲಿ ಮೆಸ್ಸಿ ಹೆಜ್ಜೆ ಹಾಕಲಿದ್ದಾರೆ. 2022ರ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೆಂಟೀನಾ ಚಾಂಪಿಯನ್‌ ಪಟ್ಟಕ್ಕೇರಿತ್ತು. ಆ ಟೂರ್ನಿಯ ಸ್ಮರಣಿಕೆಗಳ ಹರಾಜು ಮತ್ತು ಲೂಯಿಸ್‌ ಸೂರೆಜ್‌ ಅವರು ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ.

ನವದೆಹಲಿ: ಡಿಸೆಂಬರ್‌ 15

  • ಮೆಸ್ಸಿ ಅವರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

  • ಮಧ್ಯಾಹ್ನ 1.30ಕ್ಕೆ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಭಾರತ ಫುಟ್‌ಬಾಲ್‌ ತಂಡದ ಆಟಗಾರರೂ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.