
ಫುಟ್‌ಬಾಲ್
ನವದೆಹಲಿ: ಐಎಸ್‌ಎಲ್ ಬಿಕ್ಕಟ್ಟಿಗೆ ಸಂಬಂಧಿಸಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಜೊತೆ ಕ್ಲಬ್ ಸಿಇಒಗಳ ಮಾತುಕತೆ ಬುಧವಾರ ವಿಫಲವಾಯಿತು. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ಲಬ್‌ಗಳ ಪ್ರತಿನಿಧಿಗಳು ಗುರುವಾರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಭೇಟಿಯಾಗಲಿದ್ದಾರೆ.
ಈ ಮೂಲಕ ಭಾರತದ ಫುಟ್‌ಬಾಲ್ ಬಿಕ್ಕಟ್ಟು ಸಚಿವರವರೆಗೆ ತಲುಪಿದಂತಾಗಿದೆ.
ಐಐಎಫ್‌ಎಫ್‌ಗೆ ಬಿಡ್‌ನಲ್ಲಿ ವಾಣಿಜ್ಯ ಪಾಲುದಾರ ಸಿಗದ ಕಾರಣ ಈ ವರ್ಷ ಇಂಡಿಯನ್ ಸೂಪರ್ ಲೀಗ್ ನಡೆಯುವುದು ಇನ್ನೂ ಸ್ಪಷ್ಟವಾಗಿಲ್ಲ.
ಐಎಸ್‌ಎಲ್ ಕ್ಲಬ್‌ಗಳ ಜೊತೆ ಐ ಲೀಗ್ ಕ್ಲಬ್‌ಗಳನ್ನೂ ಮಾತುಕತೆಗೆ ಕರೆಯಲಾಗಿತ್ತು. ಇದನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಉದ್ದೇಶಿಲಾಗಿತ್ತು. ಆದರೆ ದಿಢೀರನೇ ಕರೆದ ಸಭೆಗೆ ಹಾಜರಾಗಲು ಅವಧಿ ಕಡಿಮೆಯಿದೆ ಎಂದು ಕ್ಲಬ್‌ಗಳು ಹೇಳಿದವು. ಹೀಗಾಗಿ ಗುರುವಾರ ಬೆಳಿಗ್ಗೆ ಕ್ಲಬ್ ಪ್ರತಿನಿಧಿಗಳು ಸಚಿವರನ್ನು ಭೇಟಿಯಾಗಲಿದ್ದಾರೆ.
ಆದರೆ, ಬಂಗಾಳದ ಬಿಜೆಪಿ ನಾಯಕರೂ ಆಗಿರುವ ಫೆಡರೇಷನ್ ಅಧ್ಯಕ್ಷ ಕಲ್ಯಾಣ್ ಚೌಬೆ ಸಭೆಯಲ್ಲಿ ಹಾಜರಿರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಐ ಲೀಗ್ ಕ್ಲಬ್ ಪ್ರತಿನಿಧಿಗಳು ಎಐಎಫ್‌ಎಫ್ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಸತ್ಯನಾರಾಯಣ ಅವರಿಗೆ ಪತ್ರ ಬರೆದಿದ್ದು, ಐಎಸ್‌ಎಲ್, ಐ ಲೀಗ್ (ಸ್ಥರ 1 ಮತ್ತು2) ಗಳಿಗೆ ‘ಸಮಾನ ಲೀಗ್ ಪಾಲುದಾರ’ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.