ADVERTISEMENT

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್‌: ಪಾಲ್ಗೊಳ್ಳಲು ಕ್ಲಬ್‌ಗಳ ಒಪ್ಪಿಗೆ

ಪಿಟಿಐ
Published 13 ಜನವರಿ 2026, 1:15 IST
Last Updated 13 ಜನವರಿ 2026, 1:15 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ನವದೆಹಲಿ: ಫೆಬ್ರುವರಿ 14ರಂದು ಆರಂಭವಾಗಲಿರುವ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ತಮ್ಮ ತಂಡಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿ ಎಲ್ಲ 14 ಕ್ಲಬ್‌ಗಳು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌)ಗೆ ಸೋಮವಾರ ಪತ್ರ ಬರೆದಿವೆ.

ವಾಣಿಜ್ಯ ಪಾಲುದಾರ ಸಿಗದ ಕಾರಣ 2025–26ನೇ ಸಾಲಿನ ಐಎಸ್‌ಎಲ್‌ ಟೂರ್ನಿ ನಡೆಯುವ ಬಗ್ಗೆ ಅನುಮಾನಗಳು ಮೂಡಿದ್ದವು. ಪಾಲ್ಗೊಳ್ಳುವಿಕೆ ಶುಲ್ಕ ವಿಧಿಸದಂತೆ ಹಾಗೂ ನಿರ್ವಹಣಾ ವೆಚ್ಚಗಳ ಹೊಣೆಯನ್ನು ವಹಿಸಿಕೊಳ್ಳುವಂತೆ ಕ್ಲಬ್‌ಗಳು ಎಐಎಫ್‌ಎಫ್‌ಗೆ ಒತ್ತಾಯಿಸಿದ್ದವು.

ADVERTISEMENT

ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಜ.5ರಂದು ಪತ್ರಿಕಾಗೋಷ್ಠಿ ನಡೆಸಿ ‘ಟೂರ್ನಿಯು ಫೆಬ್ರುವರಿ 14ರಂದು ಆರಂಭವಾಗಲಿದೆ. ಎಲ್ಲ ಕ್ಲಬ್‌ಗಳು ಭಾಗಿಯಾಗಲಿವೆ’ ಎಂದು ಘೋಷಿಸಿದ್ದರು. ಆದರೂ, ಕೆಲವು ಕ್ಲಬ್‌ಗಳು ತಮ್ಮ ತಂಡಗಳ ಪಾಲ್ಗೊಳ್ಳುವಿಕೆಯನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.