ADVERTISEMENT

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿಗೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 22:30 IST
Last Updated 27 ಅಕ್ಟೋಬರ್ 2025, 22:30 IST
ಕೊಡಗು ಎಫ್‌ಸಿ ತಂಡದ ಆದಿತ್ಯ ಪ್ರತಾಪ್‌ಸಿಂಗ್ ರಾಥೋಡ್‌ (ಎಡ) ಹಾಗೂ ರೆಬೆಲ್ಸ್‌ ಎಫ್‌ಸಿ ತಂಡದ ಕ್ರಿಸ್ಟೊಫರ್‌ ಎಂ. ಚೆಂಡಿಗಾಗಿ ಸೆಣಸಿದರು –ಚಿತ್ರ: ಬಿ.ಕೆ.ಜನಾರ್ದನ
ಕೊಡಗು ಎಫ್‌ಸಿ ತಂಡದ ಆದಿತ್ಯ ಪ್ರತಾಪ್‌ಸಿಂಗ್ ರಾಥೋಡ್‌ (ಎಡ) ಹಾಗೂ ರೆಬೆಲ್ಸ್‌ ಎಫ್‌ಸಿ ತಂಡದ ಕ್ರಿಸ್ಟೊಫರ್‌ ಎಂ. ಚೆಂಡಿಗಾಗಿ ಸೆಣಸಿದರು –ಚಿತ್ರ: ಬಿ.ಕೆ.ಜನಾರ್ದನ   

ಬೆಂಗಳೂರು: ಟಗ್ರು ಜೇಮ್ಸ್ (20ನೇ, 42ನೇ ಹಾಗೂ 63ನೇ ನಿ.) ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕೊಡಗು ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 6–0ಯಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೊಡಗು ಎಫ್‌ಸಿ ತಂಡದ ಆಟಗಾರರು ಆರಂಭದಿಂದಲೇ ಹಿಡಿತ ಸಾಧಿಸಿದರು. ಬಿ.ಎಸ್‌.ಮೃಣಾಲ್‌ ಮುತ್ತಣ್ಣ (68ನೇ ನಿ.), ಆದಿತ್ಯ ಪ್ರತಾಪ್‌ಸಿಂಗ್‌ ರಾಥೋಡ್‌ (23ನೇ ನಿ.) ಹಾಗೂ ಕಾರಿಯಪ್ಪ ಸಿ.ಕೆ. (90+2ನೇ ನಿ.) ಅವರು ಜೇಮ್ಸ್‌ ಅವರಿಗೆ ಉತ್ತಮ ಬೆಂಬಲ ನೀಡಿದರು. ರೆಬೆಲ್ಸ್‌ ಆಟಗಾರರು ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸುವಲ್ಲಿ ವಿಫಲರಾದರು.

ದಿನದ ಮತ್ತೊಂದು ಪಂದ್ಯದಲ್ಲಿ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವು 2–0ಯಿಂದ ರೂಟ್ಸ್‌ ಎಫ್‌ಸಿ ಎದುರು ನಿರಾಯಾಸ ಗೆಲುವು ದಾಖಲಿಸಿತು. ಸೌತ್‌ ಯುನೈಟೆಡ್‌ ತಂಡದ ಫರ್ಹಾನ್‌ ಫಯಾಜ್‌ (71ನೇ ನಿ.) ಹಾಗೂ ಮಿಲಿಂದ್‌ ನೇಗಿ (90+1ನೇ ನಿ.) ತಲಾ ಒಂದು ಗೋಲು ಹೊಡೆದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವು ಇಶಾನ್‌ ಜೆ.ಎಂ. (58ನೇ ನಿ.) ಅವರ ಗೋಲಿನ ಸಹಾಯದಿಂದ 1–0ಯಿಂದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.