ADVERTISEMENT

ಮಾಜಿ ಫುಟ್‌ಬಾಲ್ ಆಟಗಾರ ಪ್ರಣವ್ ಗಂಗೂಲಿ ನಿಧನ

ಪಿಟಿಐ
Published 24 ಏಪ್ರಿಲ್ 2021, 11:19 IST
Last Updated 24 ಏಪ್ರಿಲ್ 2021, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಭಾರತ ರಾಷ್ಟ್ರೀಯ ಹಾಗೂ ಮೋಹನ್ ಬಾಗನ್ ಫುಟ್‌ಬಾಲ್‌ ಕ್ಲಬ್ ತಂಡಗಳಲ್ಲಿ ಆಡಿದ್ದ ಪ್ರಣವ್ ಗಂಗೂಲಿ (75) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕ್ಲಬ್‌ನ ಮೂಲಗಳು ತಿಳಿಸಿವೆ.

1969ರಲ್ಲಿ ಮೋಹನ್ ಬಾಗನ್ ತಂಡವು ಈಸ್ಟ್ ಬೆಂಗಾಲ್ ತಂಡವನ್ನು 3–1ರಿಂದ ಮಣಿಸಿ ಐಎಫ್‌ಎ ಟ್ರೋಫಿ ಗೆಲ್ಲುವಲ್ಲಿ ಪ್ರಣವ್ ಅವರ ಪಾತ್ರ ಪ್ರಮುಖವಾಗಿತ್ತು. ಈ ಫೈನಲ್‌ ಪಂದ್ಯದಲ್ಲಿ ಅವರು ಎರಡು ಗೋಲು ದಾಖಲಿಸಿದ್ದರು.

1969ರ ಮರ್ಡೆಕಾ ಕಪ್ ಟೂರ್ನಿಯಲ್ಲಿ ಆಡಿದ ಭಾರತ ತಂಡದಲ್ಲಿ ಅವರು ಇದ್ದರು.

ADVERTISEMENT

ಬಂಗಾಳ ರಾಜ್ಯ ತಂಡವನ್ನೂ ಪ್ರತಿನಿಧಿಸಿದ್ದ ಅವರು, 1967 ಹಾಗೂ 71ರಲ್ಲಿ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪಾತ್ರ ವಹಿಸಿದ್ದರು. ನಿವೃತ್ತಿಯ ಬಳಿಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

2020ರಲ್ಲಿ ಮೋಹನ್ ಬಾಗನ್ ತಂಡ ನೀಡುವ ‘ಜೀವಮಾನ ಸಾಧನೆ ಪ್ರಶಸ್ತಿ‘ಯನ್ನು ಪ್ರಣವ್ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.