ADVERTISEMENT

ಕಾಂಡೋಮ್ ಬಳಸಿ ಕೆನೊಯಿಂಗ್ ದುರಸ್ತಿ ಮಾಡಿದ ಸ್ಪರ್ಧಿಗೆ ಡಬಲ್ ಮೆಡಲ್ ಸಂಭ್ರಮ!

ಏಜೆನ್ಸೀಸ್
Published 31 ಜುಲೈ 2021, 8:47 IST
Last Updated 31 ಜುಲೈ 2021, 8:47 IST
ಜೆಸ್ಸಿಕಾ ಫಾಕ್ಸ್
ಜೆಸ್ಸಿಕಾ ಫಾಕ್ಸ್   

ಟೋಕಿಯೊ: ಕಾಂಡೋಮ್ ಬಳಸಿ ಕೆನೊಯಿಂಗ್ (ಹುಟ್ಟಿನಂಥ ಸಾಧನ ಬಳಸಿ ನಡೆಯುವ ಬೋಟ್‌ಗಳ ರೇಸ್) ದುರಸ್ತಿ ಮಾಡಿರುವ ಸ್ಪರ್ಧಿಯೊಬ್ಬರು ಚಿನ್ನ ಸೇರಿದಂತೆ ಎರಡು ಪದಕ ಗೆದ್ದಿರುವ ಕುತೂಹಲಕಾರಿ ವಾರ್ತೆಯು ಟೋಕಿಯೊ ಒಲಿಂಪಿಕ್ಸ್‌ನಿಂದ ವರದಿಯಾಗಿದೆ.

ಆಸ್ಟ್ರೇಲಿಯಾದ ಕೆನೊಯಿಂಗ್ ಸ್ಪರ್ಧಿ ಜೆಸ್ಸಿಕಾ ಫಾಕ್ಸ್, ಕೆನೊಯಿಂಗ್ ರಿಪೇರಿಗಾಗಿ ಕಾಂಡೋಮ್ ಬಳಕೆ ಮಾಡಿದ್ದಾರೆ.

ಜೆಸ್ಸಿಕಾ ಫಾಕ್ಸ್ ಮಹಿಳೆಯರ 'ಕೆನೊಯಿಂಗ್ ಸ್ಲಾಲೊಮ್' ಮತ್ತು 'ಕಾಯಾಕ್ ಸ್ಲಾಲೊಮ್' ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಈ ವಿವರವನ್ನು ಸ್ವತಃ ಜೆಸ್ಸಿಕಾ ಅವರೇ ಬಹಿರಂಗಪಡಿಸಿದ್ದಾರೆ. ಕೆನೊಯಿಂಗ್ ಮುಂಭಾಗದಲ್ಲಿ ಕಾಣಿಸಿಕೊಂಡ ದೋಷವನ್ನು ಸರಿಪಡಿಸಲು ಕಾರ್ಬನ್ ಮಿಶ್ರಣವನ್ನು ಮೆತ್ತಿದ ಬಳಿಕ ಕಾಂಡೋಮ್ ಅಂಟಿಸಿರುವುದಾಗಿ ಹೇಳಿದ್ದಾರೆ.

ಕೆನೊಯಿಂಗ್ ಹಾಗೂ ಕಾಯಾಕ್‌ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆಯಾಗಿರುವ 27 ವರ್ಷದ ಜೆಸ್ಸಿಕಾ ಫಾಕ್ಸ್, ಒಲಿಂಪಿಕ್ಸ್ ಇತಿಹಾಸದಲ್ಲಿ ಸ್ಲಾಲೋಮ್ ರೇಸ್ ಗೆದ್ದ ಮೊದಲ ಮಹಿಳಾ ಸ್ಪರ್ಧಿ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.