ಐಲ್ ಆಫ್ ಮ್ಯಾನ್: ಭಾರತದ ಆರ್.ಪ್ರಜ್ಞಾನಂದ ಮತ್ತು ಅರ್ಜುನ್ ಇರಿಗೇಶಿ, ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಜಯಗಳಿಸಿದರು. ಆದರೆ ಗುಕೇಶ್, ವಿದಿತ್ ಗುಜರಾತಿ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಬೇಕಾಯಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರಜ್ಞಾನಂದ, ಇವಾನ್ ಝಮ್ಲಿಯಾನ್‌ಸ್ಕಿ ಮಣಿಸಿದರೆ, ಅರ್ಜುನ್, ಹಯಿಕ್ ಮಾರ್ಟಿರೊರಿಸಿಯಾನ್ ಅವರನ್ನು ಸೋಲಿಸಿದರು. ನಿಹಾಲ್ ಸರಿನ್, ಅರುಮ್ ಹಕೊಬ್ಯಾನ್ ವಿರುದ್ಧ ಗೆದ್ದರು. ಅಭಿಮನ್ಯು ಮಿಶ್ರಾ, ಅಲೆಕ್ಸಿ ಸರನಾ ವಿರುದ್ಧ ಗೆಲುವು ಪಡೆದರು. ದಿವ್ಯಾ ದೇಶಮುಖ್, ಅಲೆಕ್ಸಾಂಡರ್ ಡೊರ್ಚೆಂಕೊ ಜೊತೆ ಡ್ರಾ ಮಾಡಿಕೊಂಡರು.
ಗುಕೇಶ್, ಯಾಗಿಝ್ ಎರ್ಡೊಗ್ಮಸ್ ಜೊತೆ, ವಿದಿತ್ ಸ್ವದೇಶದ ಅಭಿಮನ್ಯು ಪುರಾಣಿಕ್ ಜೊತೆ ಪಾಯಿಂಟ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.