ಫುಟ್‌ಬಾಲ್
ಲೂಸಾನ್: 2030ರ ಫಿಫಾ ವಿಶ್ವಕಪ್ ಟೂರ್ನಿಯು ಮೊರಾಕೊ, ಸ್ಪೇನ್ ಮತ್ತು ಪೋರ್ಚುಗಲ್ ರಾಷ್ಟ್ರಗಳ ಜಂಟಿ ಆತಿಥ್ಯದಲ್ಲಿ ಹಾಗೂ 2034ರ ಟೂರ್ನಿಯು ಸೌದಿ ಅರೇಬಿಯಾದ ಆತಿಥ್ಯದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಬುಧವಾರ ನಡೆಯುವ ಫಿಫಾ ಕಾಂಗ್ರೆಸ್‌ನ ವರ್ಚುವಲ್ ಸಭೆಯಲ್ಲಿ ಎರಡು ಆವೃತ್ತಿಗಳ ಆತಿಥ್ಯದ ಹಕ್ಕುಗಳು ಅಂತಿಮಗೊಳ್ಳಲಿದೆ.
ಸಾಮಾನ್ಯವಾಗಿ ಮತದಾನದ ಮೂಲಕ ಅದು ನಿರ್ಧಾರವಾಗುತ್ತದೆ. ಆದರೆ, ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಫಿಫಾಗೆ ಸಲ್ಲಿಕೆಯಾಗಿರುವ ಏಕಮಾತ್ರ ಬಿಡ್‌ಗಳಿಗೆ ಅನುಮೋದನೆ ದೊರೆಯಲಿದೆ.
ಉರುಗ್ವೆಯಲ್ಲಿ ಮೊದಲ ವಿಶ್ವಕಪ್ (1930) ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 2030ರ ಟೂರ್ನಿಯ ತಲಾ ಒಂದು ಪಂದ್ಯಗಳು ದಕ್ಷಿಣ ಅಮೆರಿಕಾದ ರಾಷ್ಟ್ರಗಳಾದ ಉರುಗ್ವೆ, ಅರ್ಜೆಂಟೀನಾ ಮತ್ತು ಪೆರುಗ್ವೆಯಲ್ಲಿ ಆಯೋಜನೆಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.