ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ -ಎಪಿ ಸಂಗ್ರಹ ಚಿತ್ರ
ಹಾಂಗ್‌ಕಾಂಗ್: ಹಾಂಗ್‌ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಸೆಮಿಫೈನಲ್‌ನಲ್ಲಿ ಸಾತ್ವಿಕ್–ಚಿರಾಗ್ ಜೋಡಿಯು ಚೀನಾ ತೈಪೆಯ ಶೆನ್ ಶೆಂಗ್ ಕುವಾನ್– ಲಿನ್ ಬಿಂಗ್ ವೈ ಅವರ ವಿರುದ್ಧ 21-17, 21-15ರ ನೇರ ಗೇಮ್‌ಗಳಿಂದ ಗೆಲುವು ಸಾಧಿಸಿದೆ.
ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಸಾತ್ವಿಕ್–ಚಿರಾಗ್ ಜೋಡಿಯು ಶುಕ್ರವಾರ ಡಬಲ್ಸ್ ಎಂಟರ ಘಟ್ಟದ ಪಂದ್ಯದಲ್ಲಿ 21–14, 20–22, 21–16ರಿಂದ ಮಲೇಷ್ಯಾದ ಜುನೈದಿ ಅರಿಫ್– ರಾಯ್ ಕಿಂಗ್ ಯಾಪ್ ಅವರನ್ನು ಮಣಿಸಿತ್ತು.
ಸಾತ್ವಿಕ್–ಚಿರಾಗ್ ಜೋಡಿ ಪುರುಷರ ಡಬಲ್ಸ್ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 18–21, 21–15, 21–11ರಿಂದ ಥಾಯ್ಲೆಂಡ್‌ನ ಪೀರತ್‌ಚೈ ಸುಖ್‌ಫುನ್– ಪಕ್ಕಾಪೊನ್ ತೀರರಾತ್‌ಸಕುಲ್ ಜೋಡಿಯನ್ನು ಸೋಲಿಸಿತ್ತು.
ಈ ಟೂರ್ನಿಯು ಸುಮಾರು ₹4 ಕೋಟಿ ಬಹುಮಾನ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.