ADVERTISEMENT

ಜೂನಿಯರ್ ಮಹಿಳಾ ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು

ಪಿಟಿಐ
Published 28 ಮೇ 2025, 14:06 IST
Last Updated 28 ಮೇ 2025, 14:06 IST
ಹಾಕಿ
ಹಾಕಿ   

ರೊಸಾರಿಯೊ (ಅರ್ಜೆಂಟೀನಾ): ಭಾರತದ ಗೋಲ್‌ಕೀಪರ್‌ ನಿಧಿ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡದ ಆಟಗಾರ್ತಿಯರ ನಾಲ್ಕು ಗೋಲು ಯತ್ನಗಳನ್ನು ತಡೆದು ಮಿಂಚಿದರು. ಅವರ ಈ ಉತ್ತಮ ನಿರ್ವಹಣೆಯಿಂದಾಗಿ ಭಾರತ ತಂಡವು ನಾಲ್ಕು ರಾಷ್ಟ್ರಗಳ ಜೂನಿಯರ್ ಮಹಿಳಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಬುಧವಾರ ಆತಿಥೇಯ ತಂಡವನ್ನು ‘ಪೆನಾಲ್ಟಿ ಶೂಟೌಟ್‌’ನಲ್ಲಿ 2–0 ಯಿಂದ ಸೋಲಿಸಿತು.

ನಿಗದಿ ಅವಧಿಯ ಆಟ 1–1 ಸಮಬಲಗೊಂಡಿತ್ತು.

ನಿಗದಿ ಅವಧಿಯ ಆಟದಲ್ಲಿ ಕನಿಕಾ 44ನೇ ನಿಮಿಷ ಗೋಲು ಗಳಿಸಿದ್ದರು. ಪೆನಾಲ್ಟಿ ಯತ್ನಗಳಲ್ಲಿ ಲಾಲ್ರಿನ್‌ಪುಯಿ ಮತ್ತು ಲಾಲ್ತನ್ತ್‌ಲುವಾಂಗಿ ಚೆಂಡನ್ನು ಗುರಿತಲುಪಿಸಿದರು.

ADVERTISEMENT

ಅರ್ಜೆಂಟೀನಾ ತಂಡದ ಪರ ಮಿಲಾಗ್ರೊಸ್‌ ಡೆಲ್‌ ವಲೆ ನಿಗದಿ ಅವಧಿಯ 10ನೇ ನಿಮಿಷ ಗೋಲು ಗಳಿಸಿದ್ದರು.

ಭಾರತ ಶುಕ್ರವಾರ ನಡೆಯುವ ಪಂದ್ಯದಲ್ಲಿ ಚಿಲಿ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.