ADVERTISEMENT

Tokyo Olympics | ಮೀರಾಬಾಯಿ ಅನುಕರಿಸಿದ ಪುಟ್ಟ ಬಾಲಕಿಯ ವೈರಲ್ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2021, 7:45 IST
Last Updated 28 ಜುಲೈ 2021, 7:45 IST
ಮೀರಾಬಾಯಿ ಅನುಕರಿಸಿದ ಪುಟ್ಟ ಬಾಲಕಿ (ಚಿತ್ರ ಕೃಪೆ: ಶಿವಲಿಂಗಂ, ಟ್ವಿಟರ್)
ಮೀರಾಬಾಯಿ ಅನುಕರಿಸಿದ ಪುಟ್ಟ ಬಾಲಕಿ (ಚಿತ್ರ ಕೃಪೆ: ಶಿವಲಿಂಗಂ, ಟ್ವಿಟರ್)   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಮೀರಾಬಾಯಿ ಚಾನು ದೇಶದ ಹೆಮ್ಮೆಯಾಗಿದ್ದಾರೆ.

ಈಗ ಪುಟ್ಟ ಬಾಲಕಿ ಮೀರಾಬಾಯಿ ಚಾನು ಅವರು ಸ್ವರ್ಣ ಪದಕ ಗೆದ್ದ ಐತಿಹಾಸಿಕ ಕ್ಷಣವನ್ನು ಅನುಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

2016ರ ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸತೀಶ್ ಶಿವಲಿಂಗಂ ಈ ವಿಡಿಯೊವನ್ನು ಮೀರಾಬಾಯಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ 'ಜೂನಿಯರ್ ಮೀರಾಬಾಯಿ' ಎಂದು ಉಲ್ಲೇಖಿಸಿ ಇದುವೇ ನಿಜವಾದ ಪ್ರೇರಣೆ ಎಂಬ ಅಡಿಬರಹವನ್ನು ನೀಡಿದ್ದಾರೆ.

ಇದಕ್ಕೆ ಸ್ವತಃ ಪ್ರತಿಕ್ರಿಯಿಸಿರುವ ಮೀರಾಬಾಯಿ, 'ತುಂಬಾ ಕ್ಯೂಟ್, ಅತೀವ ಇಷ್ಟಪಟ್ಟಿದ್ದೇನೆ' ಎಂದಿದ್ದಾರೆ.

ದೇಶದ ನಾರಿಶಕ್ತಿಯ ಪ್ರತೀಕವಾಗಿರುವ ಮೀರಾಬಾಯಿ ಮುಂಬರುವ ಪೀಳಿಗೆಗೆ ಸ್ಫೂರ್ತಿಯಾಗಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಪುಟ್ಟ ಬಾಲಕಿ ಮೀರಾಬಾಯಿ ಅವರನ್ನು ಅನುಕರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಟ್ವೀಟ್‌ಗೆ 87 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 13 ಸಾವಿರಕ್ಕೂ ಹೆಚ್ಚು ರಿ ಟ್ವೀಟ್ ಮತ್ತು ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ಏತನ್ಮಧ್ಯೆ ಮೀರಾಬಾಯಿ ಚಾನು ಅವರಿಗೆ ತವರಿನಲ್ಲಿ ಭರ್ಜರಿ ಸ್ವಾಗತವನ್ನು ಕೋರಲಾಯಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಭಾರತ್ ಮಾತಾ ಕೀ ಜೈ, ಮೀರಾಬಾಯಿಗೆ ಜಯವಾಗಲಿ ಎಂದು ಜೈಕಾರ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.