ADVERTISEMENT

ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ₹3 ಕೋಟಿ ನಗದು ಬಹುಮಾನ ನೀಡಿದ ಮಹಾರಾಷ್ಟ್ರ ಸಿಎಂ

ಪಿಟಿಐ
Published 2 ಆಗಸ್ಟ್ 2025, 9:41 IST
Last Updated 2 ಆಗಸ್ಟ್ 2025, 9:41 IST
<div class="paragraphs"><p>ದಿವ್ಯಾ ದೇಶಮುಖ್ ಅವರಿಗೆ&nbsp;₹3 ಕೋಟಿ ನಗದು ಬಹುಮಾನ ವಿತರಿಸದ&nbsp; ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌</p></div>

ದಿವ್ಯಾ ದೇಶಮುಖ್ ಅವರಿಗೆ ₹3 ಕೋಟಿ ನಗದು ಬಹುಮಾನ ವಿತರಿಸದ  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌

   

(ಚಿತ್ರ–@CMOMaharashtra)

ನಾಗ್ಪುರ: ಫಿಡೆ ಚೆಸ್‌ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ₹3 ಕೋಟಿ ನಗದು ಬಹುಮಾನವನ್ನು ನೀಡಿದ್ದಾರೆ.

ADVERTISEMENT

ಜುಲೈ 28 ರಂದು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಫೈನಲ್‌ನಲ್ಲಿ ಸ್ವದೇಶದ ಅನುಭವಿ ಕೋನೇರು ಹಂಪಿ ಅವರನ್ನು ಸೋಲಿಸಿ ಫಿಡೆ ಚೆಸ್‌ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ದಿವ್ಯಾ ಅವರು ಜೊತೆಯಲ್ಲೇ ‘ಗ್ರ್ಯಾಂಡ್‌ಮಾಸ್ಟರ್‌’ ಬಿರುದಿಗೂ ಪಾತ್ರರಾಗಿದ್ದರು.

ದಿವ್ಯಾ ನಾಗ್ಪುರದ ಮೂಲದವರಾಗಿದ್ದು , ಸಿಎಂ ಫಡಣವೀಸ್ ಕೂಡ ಇದೇ ಊರಿನವರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಿವ್ಯಾ, ಸನ್ಮಾನಿಸಿದ್ದಕ್ಕಾಗಿ ಸಿಎಂ ಹಾಗೂ ನಾಗ್ಪುರದ ಜನರಿಗೆ ಧನ್ಯವಾದ ಅರ್ಪಿಸಿದರು. ಜೀವನದಲ್ಲಿ ಅಪರೂಪಕ್ಕೆ ಇಂತಹ ಕ್ಷಣಗಳನ್ನು ಆನಂದಿಸಲು ಅವಕಾಶ ಸಿಗುತ್ತದೆ. ‌ಇದು ನನಗೆ ತುಂಬಾ ವಿಶೇಷವಾದ ಕ್ಷಣ. ನನಗೆ ತುಂಬಾ ಸಂತೋಷವಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಮಹಾರಾಷ್ಟ್ರ ಚೆಸ್ ಅಸೋಸಿಯೇಷನ್ ನೀಡಿದ ಬೆಂಬಲಕ್ಕೆ ಧನ್ಯವಾದ ಎಂದರು.

ಸಿಎಂ ಫಡಣವೀಸ್ ಮಾತನಾಡಿ, ಸ್ಥಳೀಯ ಹುಡುಗಿಯೊಬ್ಬರು ವಿಶ್ವ ಮಟ್ಟದಲ್ಲಿ ದೇಶ ಹೆಮ್ಮೆಪಡುವಂತೆ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಒಬ್ಬ ಭಾರತೀಯನಾಗಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತು ನಾಗ್ಪುರದ ನಿವಾಸಿಯಾಗಿ ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.