ಬೆಂಗಳೂರು: ಆದ್ಯಾ ಗೌಡ ಅವರ ಅಮೋಘ ಆಟದ ಬಲದಿಂದ ಕರ್ನಾಟಕದ ಬಾಲಕಿಯರ ತಂಡವು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ 74ನೇ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿತು.
ಭಾನುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಾಲಕಿಯರು 91–56ರಿಂದ ಗುಜರಾತ್ ತಂಡವನ್ನು ಮಣಿಸಿದರು. ಕರ್ನಾಟಕದ ಪರ ಆದ್ಯಾ ಗೌಡ 23, ಅದಿತಿ ಸುಬ್ರಹ್ಮಣ್ಯನ್ 19, ತರುಣ್ ತರುಶ್ರೀ 16, ರಕ್ಷಿತಾ ಶೆಟ್ಟಿ 10 ಅಂಕಗಳಿಸಿ ಮಿಂಚಿದರು. ಗುಜರಾತ್ ಪರ ಅಹನಾ ಜಾರ್ಜ್ ನಿಯತಿಬಾ ಗೋಹಿಲ್ ಕ್ರಮವಾಗಿ 15 ಮತ್ತು 12 ಪಾಯಿಂಟ್ಸ್ ಗಳಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಆತಿಥೇಯ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.