
ಒಲಿಂಪಿಕ್ 2028ರ ಲೋಗೊ
ಮುಂಬೈ: 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಮರಳಿ ಸೇರಿಸಿರುವುದರಿಂದ ಭಾರತೀಯ ಕ್ರೀಡಾ ಅಭಿಮಾನಿಗಳ ಜೊತೆಗಿನ ಬಾಂಧವ್ಯ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥೆ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಹೇಳಿದ್ದಾರೆ.
7 ಒಲಿಂಪಿಕ್ ಪದಕಗಳ ವಿಜೇತೆ, ಮಾಜಿ ಈಜುಗಾರ್ತಿ ಮತ್ತು ಐಒಸಿ ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೊವೆಂಟ್ರಿ, ‘ಭಾರತವು ಒಲಿಂಪಿಕ್ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಆತ್ಮವಿಶ್ವಾಸದಿಂದ ನೋಡಲು ಹಲವು ಕಾರಣಗಳನ್ನು ಹೊಂದಿದೆ’ ಎಂದು ತಿಳಿಸಿದ್ದಾರೆ.
2036ರ ಒಲಿಂಪಿಕ್ಸ್ ಅನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲು ಭಾರತ ಈಗಾಗಲೇ ಅಧಿಕೃತ ಬಿಡ್ ಸಲ್ಲಿಸಿದೆ. 2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಿಕೊಂಡಿರುವುದರಿಂದ ಒಲಿಂಪಿಕ್ ಎಂಬ ಕ್ರೀಡಾ ಹಬ್ಬ ಭಾರತೀಯ ಅಭಿಮಾನಿಗಳ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಲಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಪ್ರಸಾರಕ್ಕಾಗಿ ಒಲಿಂಪಿಕ್ ಸಂಸ್ಥೆ ಉತ್ತಮ ಮಾಧ್ಯಮ ಪಾಲುದಾರರನ್ನು ಹುಡುಕುವ ಪ್ರಕ್ರಿಯೆಯಲ್ಲಿದೆ ಎಂಬುದನ್ನು ಶುಕ್ರವಾರ ಲೌಸನ್‌ನಲ್ಲಿರುವ ಐಒಸಿ ಪ್ರಧಾನ ಕಚೇರಿಯಿಂದ ಸಿಎನ್‌ಬಿಸಿ ಟಿವಿ 18 ಗ್ಲೋಬಲ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಕೊವೆಂಟ್ರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.