
ಪ್ರಣವ್ ಆನಂದ್
ಬೆಂಗಳೂರು: ಗ್ರ್ಯಾಂಡ್‌ಮಾಸ್ಟರ್ ಪ್ರಣವ್ ಆನಂದ್ ಅವರು ಕಿರ್ಗಿಸ್ಥಾನದ ಬಿಷ್ಕೆಕ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ‘ಪ್ರೆಸಿಡೆಂಟ್ಸ್ ಕಪ್’ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಬೆಂಗಳೂರಿನ ಆಟಗಾರ 9 ಸುತ್ತುಗಳಿಂದ 7 ಪಾಯಿಂಟ್ಸ್ ಗಳಿಸಿ ಅಜೇಯ ಸಾಧನೆಯೊಡನೆ ವಿಜೇತರಾದರು.
19 ವರ್ಷದ ಪ್ರಣವ್ 5 ಪಂದ್ಯಗಳನ್ನು ಗೆದ್ದು, ನಾಲ್ಕನ್ನು ಡ್ರಾ ಮಾಡಿಕೊಂಡರು. 15 ದೇಶಗಳ 91 ಆಟಗಾರರು ಕಣದಲ್ಲಿದ್ದರು. ಸ್ಥಿರ ಮತ್ತು ಕೌಶಲದ ಆಟವಾಡಿದ ಅವರು ಟೂರ್ನಿಯುದ್ದಕ್ಕೂ ಮುನ್ನಡೆ ಸಾಧಿಸಿದ್ದರು.
ಅಗ್ರ ಶ್ರೇಯಾಂಕ ಪಡೆದಿದ್ದ ಅವರು ಚಾಂಪಿಯನ್‌ಷಿಪ್ ಟ್ರೋಫಿ ಜೊತೆ ₹8.87 ಲಕ್ಷ (10,000 ಡಾಲರ್) ಬಹುಮಾನ ಪಡೆದರು. ಎಂಟು ಮಂದಿ ಆಟಗಾರರು 6.5 ಪಾಯಿಂಟ್ಸ್ ಗಳಿಸಿ ನಂತರದ ಎರಡರಿಂದ ಒಂಬತ್ತರವರೆಗಿನ ಸ್ಥಾನಗಳನ್ನು ಪಡೆದರು. ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಭರತ್ ಸುಬ್ರಮಣಿಯಮ್ ಎಚ್. ಮತ್ತು ಸಂಕಲ್ಪ್ ಗುಪ್ತಾ ಅವರು ಕ್ರಮವಾಗಿ ಆರು ಮತ್ತು ಎಂಟನೇ ಸ್ಥಾನಗಳನ್ನು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.