ಪ್ರೊ ಕಬಡ್ಡಿ ಲೀಗ್
ಜೈಪುರ: ರೋಮಾಂಚಕ ಅಂತ್ಯ ಕಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಯುಪಿ ಯೋಧಾಸ್ ಟೈಬ್ರೇಕರ್‌ನಲ್ಲಿ 6–5 ರಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತು. ಈ ಬಾರಿಯ ಲೀಗ್‌ನಲ್ಲಿ ಇದು ಯೋಧಾಸ್‌ಗೆ ನಾಲ್ಕನೇ ಗೆಲುವು.
ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣ ದಲ್ಲಿ ನಡೆದ ಈ ಪಂದ್ಯ ನಿಗದಿ ಅವಧಿಯ ವೇಳೆ 36–36ರಲ್ಲಿ ಸಮನಾಗಿತ್ತು.
ಭವಾನಿ ರಜಪೂತ್ ಯುಪಿ ಪರ 10 ಪಾಯಿಂಟ್ಸ್ ಗಳಿಸಿದರು. ಅವರಿಗೆ ಕನ್ನಡಿಗ ಗಗನ್ ಗೌಡ (6), ಸುಮಿತ್ ಸಂಗ್ವಾನ್ (4), ಆಶು ಸಿಂಗ್ (4) ಬೆಂಬಲ ನೀಡಿದರು.
ಬೆಂಗಳೂರು ಬುಲ್ಸ್ ಪರ ಆಲ್‌ರೌಂಡರ್ ಅಲಿರೇಜಾ ಮಿರ್ಜಯೆನ್ 11 ಪಾಯಿಂಟ್ಸ್ ಗಳಿಸಿದರೆ, ರೇಡರ್‌ಗಳಾದ ಆಕಾಶ್ ಶಿಂದೆ (7), ಅಶಿಶ್ ಮಲಿಕ್ (5) ಅವರಿಂದ ಬೆಂಬಲ ದೊರೆಯಿತು.
ದಬಂಗ್‌ಗೆ ಗೆಲುವು: ದಿನದ ಮತ್ತೊಂದು ಪಂದ್ಯದಲ್ಲಿ ಅಶು ಮಲಿಕ್ (23 ಅಂಕ) ಅವರ ಆಟದ ಬಲದಿಂದ ಡೆಲ್ಲಿ ದಬಂಗ್ ತಂಡವು 47–26ರಿಂದ ಯು ಮುಂಬಾ ತಂಡವನ್ನು ಮಣಿಸಿ, ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.