
ಪ್ರೊ ಕಬಡ್ಡಿ ಲೀಗ್
ಜೈಪುರ: ಅತ್ಯುತ್ತಮ ಲಯದಲ್ಲಿರುವ ದೇವಾಂಕ್ ದಲಾಲ್ ಅವರ 22 ಅಂಕಗಳ ನೆರವಿನಿಂದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಶನಿವಾರ 48–42 ರಿಂದ ಪಟ್ನಾ ಪೈರೇಟ್ಸ್ ತಂಡವನ್ನು ಸೋಲಿಸಿತು.
ಇದು ದಲಾಲ್ ಅವರಿಗೆ ಸತತ ಎಂಟನೇ ಸೂಪರ್ ಟೆನ್ ಆಗಿದೆ. ಮೊದಲಾರ್ಧದಲ್ಲೇ ಅವರು 15 ಅಂಕ ಕಲೆಹಾಕಿದ್ದರು.
ಆದರೆ ಪಂದ್ಯ ಉತ್ತಮ ಉತ್ತಮ ಹೋರಾಟದಿಂದ ಕೂಡಿತ್ತು. ಪೈರೇಟ್ಸ್ ಪರ ರೇಡರ್‌ಗಳಾದ ಮಣೀಂದರ್ ಸಿಂಗ್ (12) ಮತ್ತು ಅಯನ್ (15) ಪ್ರತಿಹೋರಾಟದಿಂದ ಗಮನ ಸೆಳೆದರು. ಇಬ್ಬರೂ ಸೂಪರ್ ಟೆನ್ ಸಾಧನೆಗೆ ಪಾತ್ರರಾದರು. ವಿರಾಮದ ವೇಳೆಗೆ ವಾರಿಯರ್ಸ್ 26–25 ರಲ್ಲಿ ಒಂದು ಅಂಕ ಮುನ್ನಡೆ ಪಡೆದಿತ್ತು. ದಲಾಲ್ ಜೊತೆಗೆ ವಾರಿಯರ್ಸ್ ಪರ ಹಿಮಾಂಶು ನರ್ವಾಲ್ ಮತ್ತು ಆಶಿಶ್ ತಲಾ ಐದು ಅಂಕ ಗಳಿಸಿದರು.
ಪ್ಯಾಂಥರ್ಸ್‌ಗೆ ಸೋಲು: ಇನ್ನೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ 37–28 ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ತಲೈವಾಸ್ ಪರ ಅರ್ಜುನ್ ದೇಶ್ವಾಲ್ 13 ಅಂಕ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.