ADVERTISEMENT

10ನೇ ಆವೃತ್ತಿಯ ನೂರನೇ ಪಂದ್ಯ: ಮಿಂಚಿದ ಮಣಿಂದರ್, ನಿತಿನ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
<div class="paragraphs"><p> ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡದ ರೈಡರ್‌ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಪಾಯಿಂಟ್‌ ಗಳಿಸಲು ಯತ್ನಿಸಿದ ಕ್ಷಣ</p></div>

ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡದ ರೈಡರ್‌ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಪಾಯಿಂಟ್‌ ಗಳಿಸಲು ಯತ್ನಿಸಿದ ಕ್ಷಣ

   

ದೆಹಲಿ:  ನಾಯಕ ಮಣಿಂದರ್‌ ಸಿಂಗ್‌ (11) ಮತ್ತು ನಿತಿನ್‌ ಕುಮಾರ್‌ (13) ಅವರ ಅಮೋಘ ರೈಡಿಂಗ್ ಬಲದಿಂದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 100ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು 45–38 ಪಾಯಿಂಟ್ಸ್‌ಗಳಿಂದ ಸೋಲಿಸಿ ಐದು ಅಂಕಗಳನ್ನು ಕಲೆಹಾಕಿತು.

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದೆಹಲಿ ಪರ ಪ್ರಮುಖ ರೈಡರ್‌ ಆಶು ಮಲಿಕ್ ಹೋರಾಟ ತೋರಿ 14 ಟಚ್‌ ಪಾಯಿಂಟ್ಸ್ ಸಹಿತ 17 ಪಾಯಿಂಟ್ಸ್ ಗಳಿಸಿದರೂ, ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಇತರ ಆಟಗಾರರಿಂದ ಅವರಿಗೆ ಉತ್ತಮ ಬೆಂಬಲ ದೊರೆಯಲಿಲ್ಲ. ಒಂದೆಡೆ ಬೆಂಗಾಲ್ ತಂಡ ಹ್ಯಾಟ್ರಿಕ್ ಸೋಲಿನಿಂದ ಹೊರಬಂದರೆ, ಇನ್ನೊಂದೆಡೆ ದಬಾಂಗ್ ತಂಡ ಮೂರು ಪಂದ್ಯಗಳ ಸತತ ಗೆಲುವಿನ ನಂತರ ಸೋಲಿಗೀಡಾಯಿತು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 34–30 ಪಾಯಿಂಟ್‌ಗಳಿಂದ ಗುಜರಾತ್ ಜೈಂಟ್ಸ್ ಮೇಲೆ ಜಯಗಳಿಸಿತು. ಗುಜರಾತ್ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮುನ್ನಡೆಯಲ್ಲಿತ್ತು.

ಶನಿವಾರದ ಪಂದ್ಯಗಳು: ಯು.ಪಿ. ಯೋಧಾಸ್‌ –ಯು ಮುಂಬಾ (ರಾತ್ರಿ 8), ದಬಾಂಗ್‌ ದಿಲ್ಲಿ– ತೆಲುಗು ಟೈಟನ್ಸ್‌ (ರಾತ್ರಿ 9)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.