ಪ್ರೊ ಕಬಡ್ಡಿ ಲೀಗ್
ನವದೆಹಲಿ: ಹರಿಯಾಣ ಸ್ಟೀಲರ್ಸ್ ತಂಡ, ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡದ ಮೇಲೆ 39–32 ರಲ್ಲಿ ಏಳು ಪಾಯಿಂಟ್‌ಗಳ ಜಯಪಡೆಯಿತು.
ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೇಡರ್ ಶಿವಂ ಪತಾರೆ ಅವರ ಸೂಪರ್ ಟೆನ್ (12 ಪಾಯಿಂಟ್) ಮತ್ತು ನಾಯಕ ಜೈದೀಪ್ (6 ಪಾಯಿಂಟ್) ಅವರ ರಕ್ಷಣಾ ಕೌಶಲ ಸ್ಟೀಲರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಪಟ್ನಾ ಪರ ಅಯಾನ್ (17 ಪಾಯಿಂಟ್ಸ್) ಅವರ ರೇಡಿಂಗ್ ಸಾಹಸ ಫಲ ನೀಡಲಿಲ್ಲ.
ಹರಿಯಾಣ ಸ್ಟೀಲರ್ಸ್ ಆಡಿರುವ 14 ಪಂದ್ಯಗಳಲ್ಲಿ ಏಳು ಗೆದ್ದು, ಅಷ್ಟೇ ಪಂದ್ಯಗಳನ್ನು ಸೋತಿದೆ. 14 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನಕ್ಕೇರಿತು ಪಟ್ನಾ ಪೈರೇಟ್ಸ್‌ಗೆ ಇದು 12 ಪಂದ್ಯಗಳಲ್ಲಿ 9ನೇ ಸೋಲು. ಆರು ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಯೋಧಾಸ್‌ಗೆ ಸುಲಭ ಜಯ: ಯುಪಿ ಯೋಧಾಸ್ ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 40–24 ಪಾಯಿಂಟ್‌ಗಳಿಂದ ಸೋಲಿಸಿತು. ವಿರಾಮದ ವೇಳೆ 13–11 ಪಾಯಿಂಟ್‌ಗಳಿಂದ ಮುಂದಿದ್ದ ಯೋಧಾಸ್ ನಂತರ ಹಿಡಿತ ಬಿಗಿಗೊಳಿಸಿತು.
ಯೋಧಾಸ್ ಪರ ಗುಮನ್ ಸಿಂಗ್ 12 ಅಂಕ, ಭವಾನಿ ರಜಪೂತ್ 5 ಅಂಕ ಗಳಿಸಿದರು. ಮುಂಬಾ ಪರ ಸಂದೀಪ್ 7 ಮತ್ತು ಅಂಕಿತ್ 5 ಅಂಕ ಗಳಿಸಿದರು. ಮುಂಬಾ 14 ಪಂದ್ಯಗಳಲ್ಲಿ ಏಳು ಗೆದ್ದು, ಏಳು ಸೋತಿದ್ದು 14 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಯೋಧಾಸ್‌ಗೆ ಇದು 14 ಪಂದ್ಯಗಳಲ್ಲಿ ಐದನೇ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.