ADVERTISEMENT

ವಿಶ್ವಕಪ್‌ ಶೂಟಿಂಗ್‌, ಏಷ್ಯನ್‌ ಗೇಮ್ಸ್‌: ಗನೀಮತ್, ದರ್ಶನಾಗೆ ಸ್ಥಾನ

ಪಿಟಿಐ
Published 25 ಜೂನ್ 2023, 13:37 IST
Last Updated 25 ಜೂನ್ 2023, 13:37 IST
ಗನೀಮತ್‌ ಸೆಖೊ
ಗನೀಮತ್‌ ಸೆಖೊ   

ನವದೆಹಲಿ: ಯುವ ಶೂಟರ್‌ ಗನೀಮತ್‌ ಸೆಖೊ ಮತ್ತು ದರ್ಶನಾ ರಾಠೋಡ್‌ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಮತ್ತು ಏಷ್ಯನ್‌ ಗೇಮ್ಸ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವಕಪ್‌ ಶೂಟಿಂಗ್‌ ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯಲಿದ್ದರೆ, ಏಷ್ಯನ್‌ ಗೇಮ್ಸ್‌ ಚೀನಾದ ಹಾಂಗ್‌ಜೌನಲ್ಲಿ ಸೆ.23 ರಿಂದ ನಡೆಯಲಿದೆ.

22 ವರ್ಷದ ಗನೀಮತ್‌ ಅವರು ವಿಶ್ವಕಪ್‌ನ ಸ್ಕೀಟ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್‌ ಎನಿಸಿಕೊಂಡಿದ್ದರು. 2021 ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ ಅವರು ಕಂಚು ಜಯಿಸಿದ್ದರು. ಜೂನಿಯರ್‌ ವಿಶ್ವಕಪ್‌ನಲ್ಲೂ ಪದಕ ಸಾಧನೆ ಮಾಡಿದ್ದರು. ಕಳೆದ ತಿಂಗಳು ಕಜಕಸ್ತಾನದ ಅಲ್ಮಾಟಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಬೆಳ್ಳಿ ಜಯಿಸಿದ್ದರು.

ADVERTISEMENT

ಪುರುಷರ ಸ್ಕೀಟ್‌ ತಂಡದಲ್ಲಿ ಅನಂತ್‌ಜೀತ್‌ ಸಿಂಗ್, ಅಂಗದ್‌ವೀರ್‌ ಸಿಂಗ್‌ ಮತ್ತು ಗುರುಜೋತ್‌ ಸಿಂಗ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ನಾಲ್ಕು ಟ್ರಯಲ್ಸ್‌ಗಳು ಮತ್ತು 2023ರಲ್ಲಿ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನೀಡಿದ ಪ್ರದರ್ಶನವನ್ನು ಆಧರಿಸಿ, ರಾಷ್ಟ್ರೀಯ ರೈಫಲ್‌ ಸಂಸ್ಥೆಯು (ಎನ್‌ಆರ್‌ಎಐ) ತಂಡವನ್ನು ಪ್ರಕಟಿಸಿದೆ.

ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್‌ ಗೇಮ್ಸ್‌ಗೆ ತಂಡ:

ಟ್ರ್ಯಾಪ್‌ (ಪುರುಷರ ವಿಭಾಗ): ಪೃಥ್ವಿರಾಜ್‌ ತೊಂಡೈಮನ್, ಕೈನನ್‌ ಚೆನಾಯ್, ಜೊರಾವರ್‌ ಸಿಂಗ್‌ ಸಂಧು

ಮಹಿಳೆಯರು: ಮನೀಷಾ ಕೀರ್, ಪ್ರೀತಿ ರಜಕ್, ರಾಜೇಶ್ವರಿ ಕುಮಾರಿ

ಸ್ಕೀಟ್‌ (ಪುರುಷರು): ಅನಂತ್‌ಜೀತ್‌ ಸಿಂಗ್, ಅಂಗದ್‌ವೀರ್‌ ಸಿಂಗ್‌, ಗುರುಜೋತ್‌ ಸಿಂಗ್.

ಮಹಿಳೆಯರು: ಗನೀಮತ್‌ ಸೆಖೊ, ಪರಿನಾಜ್ ಧಾಲೀವಾಲ್, ದರ್ಶನಾ ರಾಠೋಡ್

ಟ್ರ್ಯಾಪ್‌ ಮಿಕ್ಸಡ್‌ (ಏಷ್ಯನ್‌ ಗೇಮ್ಸ್‌ಗೆ ಮಾತ್ರ): ಪೃಥ್ವಿರಾಜ್‌/ ಮನೀಷಾ ಹಾಗೂ ಕೈನನ್‌/ ಪ್ರೀತಿ

ಸ್ಕೀಟ್ ಮಿಕ್ಸಡ್: ಅನಂತ್‌ಜೀತ್‌/ ಗನೀಮತ್ ಹಾಗೂ ಅಂಗದ್‌/ ಪರಿನಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.