ಭಾರತದ ಆಟಗಾರ್ತಿಯರು
ನವದೆಹಲಿ: ಇರಾನ್‌ನ ಟೆಹರಾನ್‌ನಲ್ಲಿ ಹೋದ ವಾರ ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡಕ್ಕೆ ಕ್ರೀಡಾ ಸಚಿವಾಲಯ ₹67.50 ಲಕ್ಷ ಬಹುಮಾನ ಘೋಷಿಸಿದೆ.
ಶನಿವಾರ ನಡೆದ ಫೈನಲ್‌ನಲ್ಲಿ 32–25 ರಿಂದ ಇರಾನ್ ತಂಡವನ್ನು ಸೋಲಿಸಿದ್ದ ಭಾರತ ತಂಡ ಪ್ರಶಸ್ತಿ ಉಳಿಸಿಕೊಂಡಿತ್ತು. ತಂಡ ಮಂಗಳವಾರ ಹಿಂತಿರುಗಿದ್ದು, ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ತಂಡದ ಆಟಗಾರ್ತಿಯರನ್ನು ಸನ್ಮಾನಿಸಿದರು.
ಕಬಡ್ಡಿ ಆಟಗಾರ್ತಿಯರಿಗೆ ಹೆಚ್ಚು ಅವಕಾಶ ಕಲ್ಪಿಸಲು ಪುರುಷರ ಲೀಗ್ (ಪಿಕೆೆಎಲ್) ಮಾದರಿಯಲ್ಲಿ ಮಹಿಳಾ ಕಬಡ್ಡಿ ಲೀಗ್ ಆರಂಭಿಸುತ್ತೇವೆ. ವಿಕಸಿತ ಭಾರತ ಕಲ್ಪನೆ ಸಾಕಾರಗೊಳ್ಳಲು ಪ್ರಧಾನಿ ಮೋದಿ ಅವರು ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಲು ಬಯಸಿದ್ದಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.