ADVERTISEMENT

ಚೆಸ್‌: ಪ್ರಶಸ್ತಿ ಸನಿಹದಲ್ಲಿ ನಾದಿರ್ಬೆಕ್

ಪಿಟಿಐ
Published 1 ಫೆಬ್ರುವರಿ 2026, 18:27 IST
Last Updated 1 ಫೆಬ್ರುವರಿ 2026, 18:27 IST
ಚೆಸ್‌
ಚೆಸ್‌   

ವಿಯ್ಕ್‌ ಆನ್‌ ಝೀ (ನೆದರ್ಲೆಂಡ್ಸ್‌): ವಿಶ್ವ ಚಾಂಪಿಯನ್‌ ಡಿ. ಗುಕೇಶ್‌ ಅವರು ಭಾನುವಾರ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್‌ ಟೂರ್ನಿಯ 12ನೇ ಸುತ್ತಿನಲ್ಲಿ ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ ವಿರುದ್ಧ ಡ್ರಾ ಮಾಡಿಕೊಂಡರು.

ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ (8 ಅಂಕ) ಅವರು ಜರ್ಮನಿಯ ಬ್ಲೂಬಾಮ್ ಮಥಾಯಸ್ ವಿರುದ್ಧ ಜಯ ಸಾಧಿಸುವ ಮೂಲಕ ಅಗ್ರಸ್ಥಾನದೊಂದಿಗೆ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾದರು.

ವಿಶ್ವಕಪ್ ವಿಜೇತ ಜಾವೊಖಿರ್ ಸಿಂದರೋವ್ ಅವರು ಭಾರತದ ಆರ್. ಪ್ರಜ್ಞಾನಂದ (5) ವಿರುದ್ಧ ಡ್ರಾಗೆ ತೃಪ್ತಿಪಟ್ಟು 7.5 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದರು. ಅವರದೇ ದೇಶದ ನಾದಿರ್ಬೆಕ್ ಅರ್ಧ ಅಂಕದಿಂದ ಮುಂದಿದ್ದಾರೆ. ಹೀಗಾಗಿ, ವರ್ಷದ ಮೊದಲ ಸೂಪರ್ ಟೂರ್ನಿಯಲ್ಲಿ ಉಜ್ಬೇಕಿಸ್ತಾನದ ಆಟಗಾರರು ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ.

ADVERTISEMENT

ನೀಮನ್, ಹಾಲೆಂಡ್‌ನ ಜೋರ್ಡನ್ ವಾನ್ ಫೊರೀಸ್ಟ್, ಜರ್ಮನಿಯ ವಿನ್ಸೆಂಟ್‌ ಕೀಮರ್‌ ತಲಾ 7 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.