ADVERTISEMENT

PHOTOS | ಭಾರತ ಪುರುಷ-ಮಹಿಳಾ ಹಾಕಿ ತಂಡದ ಐತಿಹಾಸಿಕ ಸಾಧನೆ

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಪುರುಷ ಹಾಕಿ ತಂಡವು 49 ವರ್ಷಗಳ ಬಳಿಕ ಈ ಸಾಧನೆ ಮಾಡಿದೆ. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರೂ ಆಗ ನಾಕೌಟ್ ಇರಲಿಲ್ಲ. ಅತ್ತ ಮಹಿಳಾ ತಂಡವು ಇದೇ ಮೊದಲ ಬಾರಿಗೆ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದೆ. 1980ರಲ್ಲಿ(ರೌಂಡ್ ರಾಬಿನ್ ಟೂರ್ನಿ) ನಾಲ್ಕನೇ ಸ್ಥಾನ ಪಡೆದಿರುವುದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 9:57 IST
Last Updated 2 ಆಗಸ್ಟ್ 2021, 9:57 IST
ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ಗೆಲುವಿನ ಸಂಭ್ರಮ
ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ಗೆಲುವಿನ ಸಂಭ್ರಮ   
ಕ್ವಾರ್ಟರ್‌ನಲ್ಲಿ ಬ್ರಿಟನ್ ವಿರುದ್ಧ 3-1 ಗೋಲುಗಳ ಅಂತರದ ಗೆಲುವು, ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ಎದುರಾಳಿ
ಅತ್ತ ಮಹಿಳಾ ತಂಡವು 1-0 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ.
ಪುರುಷರ ಹಾಕಿ ತಂಡ 49 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದೆ.
ಮಹಿಳಾ ಹಾಕಿ ತಂಡವು ಇದೇ ಮೊದಲ ಬಾರಿಗೆ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಿದೆ.
ಪುರುಷರ ಹಾಕಿ ತಂಡವು ಕೊನೆಯದಾಗಿ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿತ್ತು.
ಮಹಿಳಾ ತಂಡವು 1980ರಲ್ಲಿ(ರೌಂಡ್ ರಾಬಿನ್ ಟೂರ್ನಿ) ನಾಲ್ಕನೇ ಸ್ಥಾನ ಪಡೆದಿರುವುದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.
ಭಾರತದ ತಡೆಗೋಡೆ, ಅನುಭವಿ ಗೋಲ್‌ಕೀಪರ್ 'ಪಿ.ಆರ್‌.ಶ್ರೀಜೇಶ್'
ಮಹಿಳಾ ಹಾಕಿ ತಂಡಕ್ಕೆ ಅಂತಿಮ ನಾಲ್ಕರ ಘಟ್ಟದಲ್ಲಿ ಅರ್ಜೆಂಟೀನಾ ಸವಾಲು
ಚಿನ್ನ ಗೆಲ್ಲುವ ತವಕದಲ್ಲಿ ರಾಣಿ ರಾಂಪಾಲ್ ಪಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.