ADVERTISEMENT

Tokyo Olympics | ಸ್ಕೇಟ್‌ಬೋರ್ಡಿಂಗ್‌ನಲ್ಲಿ ವಿಶ್ವ ಗೆದ್ದ ಬಾಲಕಿಯರು

ರಾಯಿಟರ್ಸ್
Published 4 ಆಗಸ್ಟ್ 2021, 8:44 IST
Last Updated 4 ಆಗಸ್ಟ್ 2021, 8:44 IST
ಮಹಿಳೆಯರ ಸ್ಕೇಟ್‌ಬೋರ್ಡಿಂಗ್ ಪಾರ್ಕ್ ಸ್ಪರ್ಧೆಯಲ್ಲಿ ಪದಕ ವಿಜೇತರು
ಮಹಿಳೆಯರ ಸ್ಕೇಟ್‌ಬೋರ್ಡಿಂಗ್ ಪಾರ್ಕ್ ಸ್ಪರ್ಧೆಯಲ್ಲಿ ಪದಕ ವಿಜೇತರು   

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಸ್ಕೇಟ್‌ಬೋರ್ಡಿಂಗ್ ಸ್ಪರ್ಧೆಯಲ್ಲಿ ಬಾಲಕಿಯರು ಅಮೋಘ ಸಾಧನೆ ಮಾಡಿದ್ದಾರೆ. ಮಹಿಳೆಯರ ಸ್ಕೇಟ್‌ಬೋರ್ಡಿಂಗ್ ಪಾರ್ಕ್ ಸ್ಪರ್ಧೆಯಲ್ಲಿ 19 ವರ್ಷದ ಜಪಾನ್‌ನ ಸಕುರಾ ಯೊಸೊಝುಮಿ ಚಿನ್ನದ ಪದಕ ಜಯಿಸಿದ್ದಾರೆ.

ಆತಿಥೇಯ ಜಪಾನ್‌ ಮೂಲದವರೇ ಆದ 12 ವರ್ಷದ ಕೊಕೊನಾ ಹಿರಾಕಿ ಬೆಳ್ಳಿ ಮತ್ತು 13 ವರ್ಷದ ಬ್ರಿಟನ್‌ನ ಸ್ಕೈ ಬ್ರೌನ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಬ್ರಿಟನ್‌ನ ಸ್ಕೈ ಬ್ರೌನ್ ಪದಕ ಗೆಲ್ಲುವ ನೆಚ್ಚಿನ ತಾರೆಯಾಗಿ ಹೊರಹೊಮ್ಮಿದ್ದರು. ಆದರೆ ಪದಕ ಸುತ್ತಿನಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ ಪರಿಣಾಮ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

1970ರ ದಶಕದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಖಾಲಿ ಈಜುಕೊಳದಿಂದ ಉದಯಿಸಿರುವ ಈ ರೀತಿಯ ಸ್ಕೇಟ್‌ಬೋರ್ಡಿಂಗ್ ಸ್ಪರ್ಧೆಯು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.