ಚಿಬಾ (ಜಪಾನ್): ಟೋಕಿಯೊಒಲಿಂಪಿಕ್ಸ್‌ನಲ್ಲಿಭಾರತದ ಪದಕದ ಭರವಸೆಯಾಗಿದ್ದ ಕುಸ್ತಿಪಟು ವಿನೇಶಾ ಪೋಗಟ್ ಎಂಟರ ಘಟ್ಟದಲ್ಲೇ ಭಾರಿ ಆಘಾತ ಎದುರಿಸಿದ್ದಾರೆ.
ಪ್ರೀ-ಕ್ವಾರ್ಟರ್ ಫೈನಲ್ ಗೆದ್ದು ಉತ್ತಮ ಲಯ ಕಂಡುಕೊಂಡಿದ್ದ ಪೋಗಟ್‌ಗೆ ಕ್ವಾರ್ಟರ್‌ಫೈನಲ್‌ನಲ್ಲಿ ಅಚ್ಚರಿಯ ಸೋಲು ಎದುರಾಗಿದೆ.
ಮಹಿಳೆಯರ 53 ಕೆ.ಜಿ ಫ್ರೀ-ಸ್ಟೈಲ್ ವಿಭಾಗದಲ್ಲಿ ಬೆಲರೂಸ್‌ನ ವೆನೆಸಾ ಕಾಲಜಿನ್‌ಸ್ಕಾಯಾ ವಿರುದ್ಧ ಸೋಲಿಗೆ ಶರಣಾದರು. ಇದರಿಂದ ಬಹುತೇಕ ಪದಕದ ಆಸೆ ಕಮರಿದೆ.
ಎದುರಾಳಿ ಕುಸ್ತಿಪಟುವಿನ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟದ ಮುಂದೆ ಪೋಗಟ್‌ಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ವರ್ಷಾರಂಭದಲ್ಲಿ ಪೋಗಟ್ ವಿರುದ್ಧ ಉಕ್ರೇನ್‌ನಲ್ಲಿ ಎದುರಾದ ಸೋಲಿಗೆ ಯುರೋಪಿನ ಚಾಂಪಿಯನ್ ಕುಸ್ತಿಪಟು ಸೇಡು ತೀರಿಸಿಕೊಂಡರು.
ಈ ಮೊದಲು ಪೋಗಟ್, ಪ್ರೀ-ಕ್ವಾರ್ಟರ್‌ನಲ್ಲಿ ಸ್ವೀಡನ್‌ನ ಸೋಫಿಯಾ ಮಾಟ್ಸನ್ ವಿರುದ್ಧ 7-1ರಲ್ಲಿ ಗೆಲುವು ದಾಖಲಿಸಿದ್ದರು.
ಹಾಗೊಂದು ವೇಳೆ ಎದುರಾಳಿ ವೆನೆಸಾ ಫೈನಲ್‌ಗೆ ಪ್ರವೇಶಿಸಿದ್ದಲ್ಲಿ ಪೋಗಟ್ ಪದಕದ ಆಸೆ ಮತ್ತೊಮ್ಮೆ ಚಿಗುರೊಡೆಯಲಿದೆ. ಅಲ್ಲದೆ ಕಂಚಿನ ಪದಕಕ್ಕಾಗಿ ರಿಪೇಚ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಲಭ್ಯವಾಗಲಿದೆ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯದ ಕಾರಣ ಕ್ವಾರ್ಟರ್‌ಫೈನಲ್‌ನಿಂದ ಹೊರಬಿದ್ದಿದ್ದಪೋಗಟ್, ಪದಕ ಗೆಲ್ಲುವ ಕನಸು ಭಗ್ನಗೊಂಡಿತ್ತು.
ಏತನ್ಮಧ್ಯೆ ಮಹಿಳೆಯರ 57 ಕೆ.ಜಿ ರಿಪೇಚ್ ಸುತ್ತಿನಲ್ಲಿ ರಷ್ಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಸೋಲು ಅನುಭವಿಸಿರುವ 19 ವರ್ಷದ ಅನ್ಶು ಮಲಿಕ್ ಹೋರಾಟ ಅಂತ್ಯಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.