ಜಾಸ್ಮಿನ್ ಲಂಬೋರಿಯಾ
ಲಿವರ್‌ಪೂಲ್: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಜಾಸ್ಮಿನ್ ಲಂಬೋರಿಯಾ ಚಿನ್ನ, ನೂಪುರ್ ಶೆವೊರಾನ್ ಬೆಳ್ಳಿ ಮತ್ತು ಪೂಜಾ ರಾಣಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ವಿರುದ್ಧ 4-1ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಆ ಮೂಲಕ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿಗೆ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ನೂಪುರ್‌ಗೆ ಬೆಳ್ಳಿ...
ಮತ್ತೊಂದೆಡೆ ಮಹಿಳೆಯರ 80+ ಕೆ.ಜಿ ವಿಭಾಗದಲ್ಲಿ ಭಾರತದ ನೂಪುರ್ ಶೆವೊರಾನ್ ಬೆಳ್ಳಿ ಪದಕ ಜಯಿಸಿದ್ದಾರೆ.
ರೋಚಕ ಫೈನಲ್‌ನಲ್ಲಿ ನೂಪುರ್ ಅವರು ಪೋಲೆಂಡ್‌ನ ಅಗಾಟಾ ಕಾಜ್ಮಾರ್ಸ್ಕಾ ವಿರುದ್ಧ 2-3ರ ನಿಕಟ ಅಂತರದಲ್ಲಿ ಸೋಲನುಭವಿಸಿದ್ದಾರೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ನೂಪುರ್ ಅವರ ಮೊದಲ ಪದಕ ಇದಾಗಿದೆ.
ಪೂಜಾಗೆ ಬೆಳ್ಳಿ ...
ಅತ್ತ ಮಹಿಳೆಯರ 80 ಕೆ.ಜಿ ವಿಭಾಗದಲ್ಲಿ ಪೂಜಾ ರಾಣಿ ಕಂಚಿನ ಪದಕ ಗೆದ್ದಿದ್ದಾರೆ.
ಸೆಮಿಫೈನಲ್‌ನಲ್ಲಿ ಪೂಜಾ ಅವರು ಇಂಗ್ಲೆಂಡ್‌ನ ಆಸ್ಕ್ವಿತ್ ಎಮಿಲಿ ವಿರುದ್ಧ 4-1ರ ಅಂತರದಲ್ಲಿ ಮಣಿದಿದ್ದಾರೆ.
ಇದು ಕೂಡಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪೂಜಾ ಅವರ ಪದಕ ಸಾಧನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.