
ಗೌತಮ್ ಕೃಷ್ಣ
ದೋಹಾ: ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ಭಾರತದ ಅರ್ಜುನ್ ಇರಿಗೇಶಿ ಅವರು ಶುಕ್ರವಾರ ಆರಂಭವಾದ ಫಿಡೆ ವಿಶ್ವ ರ್‍ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನ ನಂತರ ತಲಾ ನಾಲ್ಕು ಅಂಕಗಳೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ.
12 ಮಂದಿ ತಲಾ 3.5 ಪಾಯಿಂಟ್ಸ್ ಗಳಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಅಚ್ಚರಿಯ ಫಲಿತಾಂಶ ನೀಡಿದ ಭಾರತದ ಐಎಂ ಗೌತಮ್ ಕೃಷ್ಣ ಅವರೂ ಇವರಲ್ಲಿ ಒಳಗೊಂಡಿದ್ದಾರೆ. ಅವರು ತಮಗಿಂತ ಮೇಲಿನ ಕ್ರಮಾಂಕದ ಇಂಡ್ಜಿಕ್ ಅಲೆಕ್ಸಾಂಡರ್, ಸ್ವದೇಶದ ಅರವಿಂದ ಚಿದಂಬರಮ್, ಟಿಮೋರ್ ರಾಜಾಬೋವ್ ವಿರುದ್ಧ ಜಯಗಳಿಸಿದರಲ್ಲದೇ, ಅಲೆಕ್ಸಾಂಡರ್ ಗ್ರಿಶ್ಚುಕ್ ವಿರುದ್ಧ ಡ್ರಾ ಮಾಡಿಕೊಂಡರು.
ಮಹಿಳೆಯರ ವಿಭಾಗದಲ್ಲಿ ಚೀನಾದ ಝು ಜಿನೆರ್ (4 ಅಂಕ) ಅಗ್ರಸ್ಥಾನದಲ್ಲಿದ್ದಾರೆ. ಒಂಬತ್ತನೇ ಶ್ರೇಯಾಂಕದ ಭಾರತದ ದ್ರೋಣವಲ್ಲಿ ಹಾರಿಕಾ ಸೇರಿ ಏಳು ಮಂದಿ (ತಲಾ 3.5) ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.