ಟೆನಿಸ್
ಬೆಂಗಳೂರು: ಅಗ್ರ ಶ್ರೇಯಾಂಕದ ಸ್ನಿಗ್ಧಾ ಕಾಂತ ಹಾಗೂ ಶ್ರೇಯಾಂಕರಹಿತ ಆಟಗಾರ ರೋಹಿತ್ ಗೋಪಿನಾಥ್ ಅವರು ಮಂಗಳವಾರ ಇಲ್ಲಿ ಆರಂಭಗೊಂಡ ಕೆಎಸ್‌ಎಲ್‌ಟಿಎ ಐಟಿಎಫ್ ವಿಶ್ವ ಟೆನಿಸ್ ಜೂನಿಯರ್ ಟೂರ್ನಿಯ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ರೋಹಿತ್ ಅವರು ಬಾಲಕರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 2-6, 6-3, 6-2ರಿಂದ ಏಳನೇ ಶ್ರೇಯಾಂಕದ ಪ್ರಕಾಶ್ ಸರನ್ ಅವರಿಗೆ ಆಘಾತ ನೀಡಿದರು. ಅಮೆರಿಕದ ನಿಯಾಂತ್ ಬದರಿನಾರಾಯಣನ್ 6-7 (4), 6-3, 6-1ರಿಂದ ಯಶ್ವಿನ್ ದಹಿಯಾ ವಿರುದ್ಧ ಜಯಗಳಿಸಿದರು.
ಮೂರನೇ ಶ್ರೇಯಾಂಕದ ದೇವ್ ವಿಪುಲ್ ಪಟೇಲ್, ನಾಲ್ಕನೇ ಶ್ರೇಯಾಂಕದ ವಿಶಾಲ್ ವಾಸುದೇವ್ ಎಂ. ಮತ್ತು ಅಧಿರಾಜ್ ಠಾಕೂರ್ ಅವರೂ ಎರಡನೇ ಸುತ್ತಿಗೆ ಮುನ್ನಡೆದರು.
ಬಾಲಕಿಯರ ವಿಭಾಗದಲ್ಲಿ ಸ್ನಿಗ್ಧಾ ಅವರು 6-2, 6-1ರಿಂದ ಶ್ರೇಯಾಂಕ ರಹಿತ ಆಟಗಾರ್ತಿ ಶ್ರೀಯಾ ದೇಶಪಾಂಡೆ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿ 16ರ ಘಟ್ಟಕ್ಕೆ ಪ್ರವೇಶ ಪಡೆದರು. ಸೃಷ್ಟಿ ಕಿರಣ್ ಅವರು 7-6 (6), 6-3ರಿಂದ ತೇಜಸ್ವಿ ಮನ್ನೆನ್ ವಿರುದ್ಧ ಸುಲಭ ಗೆಲುವು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.