ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ವಿನೇಶ್ ಫೋಗಟ್. ಅವರೊಂದಿಗೆ ಬಜರಂಗ್ ಪೂನಿಯಾ ಇದ್ದರು.
ಪಿಟಿಐ ಚಿತ್ರ
ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್‌ನಿಂದ ಅನರ್ಹಗೊಂಡು ಆಘಾತ ಅನುಭವಿಸಿದ್ದ ವಿನೇಶ್ ಫೋಗಟ್ ಅವರು ಭಾರತಕ್ಕೆ ಇಂದು (ಶನಿವಾರ) ಮರಳಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ನೂರಾರು ಅಭಿಮಾನಿಗಳು ನೋಟು ಹಾಗೂ ಹೂವಿನ ಹಾರ ಹಾಕಿ, ಬೆಂಬಲದ ಘೋಷಣೆಗಳೊಂದಿಗೆ ಸ್ವಾಗತಿಸಿದ್ದಾರೆ. ಭಾವುಕರಾದ ಫೋಗಟ್ ಕಣ್ಣೀರು ಸುರಿಸಿದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರಗಳು ಇಲ್ಲಿವೆ...
ವಿನೇಶ್ ಅವರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಅಭಿಮಾನಿಗಳ ಸಂಭ್ರಮ
ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಭಾವುಕರಾದ ವಿನೇಶ್ ಫೋಗಟ್
ವಿನೇಶ್ ಫೋಗಟ್‌ಗೆ ಸಮಾಧಾನ ಹೇಳಿದ ಬಜರಂಗ್ ಪೂನಿಯಾ. ಸಾಕ್ಷಿ ಮಲಿಕ್ ಮತ್ತು ಕಾಂಗ್ರೆಸ್ ಸಂಸದ ದೀಪಂಕರ್ ಸಿಂಗ್ ಹೂಡಾ ಸಹ ಇದ್ದರು.
ಕಣ್ಣೀರು ಒರಸಿಕೊಂಡ ಫೋಗಟ್
ಫೋಗಟ್ ಕೊರಳಿಗೆ ನೋಟಿನ ಹಾರ
ಅಭಿಮಾನಿಗಳಿಗೆ ಕೈಮುಗಿದ ಫೋಗಟ್
ರಾಷ್ಟ್ರಧ್ವಜ ಹಿಡಿದು ಒಗ್ಗಟು ಪ್ರದರ್ಶಿಸಿದ ವಿನೇಶ್, ಬಜರಂಗ್, ಮಲಿಕ್ ಮತ್ತು ಹೂಡಾ
ಫೋಗಟ್ ಮೇಲೆ ಹೂ ಮಳೆ
ಬಿಗಿ ಭದ್ರತೆ ನಡುವೆ ತಮ್ಮ ಊರು ಬಲಾಲಿಗೆ (ಹರಿಯಾಣ) ಪ್ರಯಾಣ ಬೆಳೆಸಿದ ಫೋಗಟ್
ಊರಿಗೆ ಮರಳುತ್ತಿರುವ ಫೋಗಟ್ ಅವರನ್ನು ಸ್ವಾಗತಿಸಲು ಹರಿಯಾಣದ ಛರ್ಖಿ ದಾದ್ರಿ ಎಂಬಲ್ಲಿ ರಾಷ್ಟ್ರಧ್ವಜ ಹಾಗೂ ಪೋಸ್ಟರ್‌ಗಳನ್ನು ಹಿಡಿದು ನಿಂತಿರುವ ಯುವಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.