ADVERTISEMENT

ಬ್ರಿಸ್ಬೇನ್‌ ಟೆನಿಸ್‌: ಫೈನಲ್‌ಗೆ ಅರಿನಾ ಸಬಲೆಂಕಾ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 23:30 IST
Last Updated 4 ಜನವರಿ 2025, 23:30 IST
<div class="paragraphs"><p>ಅರಿನಾ ಸಬಲೆಂಕಾ </p></div>

ಅರಿನಾ ಸಬಲೆಂಕಾ

   

ಚಿತ್ರ:ಎಎಫ್‌ಪಿ

ಬ್ರಿಸ್ಬೇನ್‌: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬ ಲೆಂಕಾ ಅವರು ರಷ್ಯಾದ ಉದಯೋ ನ್ಮುಖ ತಾರೆ ಮೀರಾ ಅಂದ್ರಯೇವಾ ಅವರ ಸವಾಲನ್ನು ನೇರ ಸೆಟ್‌ಗಳಿಂದ ಬದಿಗೊತ್ತಿ, ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್ ಟೆನಿಸ್‌ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು. ಪುರುಷರ ವಿಭಾಗ ದಲ್ಲಿ ಹಾಲಿ ಚಾಂಪಿಯನ್‌ ಗ್ರಿಗೊರ್ ಡಿಮಿ ಟ್ರೊಫ್ ಅವರು ಪೃಷ್ಠದ ನೋವಿನಿಂದ ಸೆಮಿಫೈನಲ್‌ ಪಂದ್ಯದ ಅರ್ಧದಲ್ಲೇ ಹಿಂದೆಸರಿದರು.

ADVERTISEMENT

ಆಸ್ಟ್ರೇಲಿಯಾ ಓಪನ್‌ಗೆ ಸುಮಾರು ಒಂದು ವಾರ ಉಳಿದಿರುವಂತೆ, ಬೆಲಾರಸ್‌ನ ಆಟಗಾರ್ತಿ 6–3, 6–2 ರಿಂದ ಜಯಗಳಿಸಿ ತಮ್ಮ ಸಿದ್ಧತೆಯ ಪರಿಚಯ ನೀಡಿದರು. ಕಳೆದ ವರ್ಷ ಈ ಟೂರ್ನಿಯಲ್ಲಿ ರನ್ನರ್ಸ್‌ ಅಪ್ ಆಗಿದ್ದ ಸಬಲೆಂಕಾ ಮೊದಲ ಸೆಟ್‌ನಲ್ಲಿ ಒಮ್ಮೆ, ಎರಡನೇ ಸೆಟ್‌ನಲ್ಲಿ ಎರಡು ಬಾರಿ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿದರು.

ಸಬಲೆಂಕಾ ಫೈನಲ್‌ನಲ್ಲಿ ರಷ್ಯಾದ ಕ್ವಾಲಿಫೈಯರ್ ಪೊಲಿನಾ ಕುದೆರ್‌ ಮೆಟೊವಾ ಅವರನ್ನು ಎದುರಿಸಲಿದ್ದಾರೆ. ರಷ್ಯನ್ ಆಟಗಾರ್ತಿ ಟೂರ್ನಿಯಲ್ಲಿ ಅಮೋಘ ಓಟವನ್ನು ಮುಂದುವರಿಸಿ ಉಕ್ರೇನಿನ ಅನ್ಹೆಲಿನಾ ಕಲಿನಿನಾ ಅವರನ್ನು 6–4, 6–3 ರಿಂದ ಸೋಲಿಸಿದರು.

ಬೆನ್ನಿನ ಕೆಳಭಾಗದ ತೀವ್ರ ನೋವಿನಿಂದಾಗಿ ಬಲ್ಗೇರಿಯಾದ ದಿಮಿ ಟ್ರೊಫ್‌ ಅವರು ಪುರುಷರ ವಿಭಾ ಗದ ಸಿಂಗಲ್ಸ್‌ ಸೆಮಿಫೈನಲ್ ಪಂದ್ಯದಲ್ಲಿ ನಿವೃತ್ತರಾದರು. ಆಗ ಝೆಕ್‌ ಗಣರಾಜ್ಯದ ಅವರ ಎದುರಾಳಿ, ಶ್ರೆಯಾಂಕರಹಿತ ಆಟಗಾರ ಇಝಿ ಲೆಹೆಸ್ಕಾ 6–4, 4–4ರಲ್ಲಿ ಮುಂದಿದ್ದರು. ದಿಮಿಟ್ರೊಫ್‌ ವಿಶ್ವ ಕ್ರಮಾಂಕದಲ್ಲಿ 10ನೇ ಕ್ರಮಾಂಕದಲ್ಲಿದ್ದಾರೆ. ಲೆಹೆಸ್ಕಾ ಭಾನುವಾರ ನಡೆಯುವ ಫೈನಲ್‌ನಲ್ಲಿ ಅಮೆರಿಕದ ಅಜಾನುಬಾಹು ಆಟಗಾರ ರೀಲಿ ಒಪೆಲ್ಕಾ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.