ರಿತ್ವಿಕ್ ಚೌಧರಿ
ಬ್ರಿಸ್ಬೇನ್: ಎಟಿಪಿ ಡಬಲ್ಸ್ ಸರ್ಕೀಟ್‌ನಲ್ಲಿ ಪ್ರಗತಿ ಕಾಣುತ್ತಿರುವ ಭಾರತದ ರಿತ್ವಿಕ್ ಚೌಧರಿ ಬೊಲ್ಲಿಪಲ್ಲಿ ಅವರು ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದರು. ಅವರು ನೆದರ್ಲೆಂಡ್ಸ್‌ನ ರಾಬಿನ್ ಹಾಸ್ ಜೊತೆ ಆಡಿದ್ದರು.
ಎಟಿಪಿ 250 ಮಟ್ಟದ ಈ ಟೂರ್ನಿ ಯಲ್ಲಿ ಇಂಡೊ–ಡಚ್ ಜೋಡಿ 4–6, 2–6 ರಿಂದ ರಿಂಕಿ ಹಿಜಿಕಟಾ – ಜೇಸನ್ ಕುಬ್ಲೆರ್ ಎದುರು ಸೋಲನುಭವಿಸಿತು. 65 ನಿಮಿಷಗಳಲ್ಲಿ ರಿಂಕಿ– ಜೇಸನ್ ಜಯಗಳಿಸಿದರು.
ಜನವರಿ 12ರಂದು ಆರಂಭವಾಗುವ ಆಸ್ಟ್ರೇಲಿಯನ್ ಓಪನ್‌ಗೆ ಮೊದಲು ಇದು ಪ್ರಮುಖ ಟೂರ್ನಿ ಆಗಿತ್ತು. ರಿತ್ವಿಕ್ ಅವರು ಮೆಲ್ಬರ್ನ್‌ನಲ್ಲಿ ಆರಂಭವಾಗುವ ಆಸ್ಟ್ರೇಲಿಯನ್ ಓಪನ್ ಮೂಲಕ ಮೊದಲ ಗ್ರ್ಯಾನ್‌ಸ್ಲಾಮ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.
ಶ್ರೀರಾಮ್ ಬಾಲಾಜಿ– ಮಿಗೆಲ್ ರೆಯೆಸ್ ವೆರೆಲಾ 4–6, 2–6 ರಿಂದ ಮ್ಯಾನುಯೆಲ್ ಗಿನಾರ್ಡ್– ಆರ್ಥರ್ ರಿಂಡರ್‌ನೆಕ್ ಜೋಡಿಗೆ ಶರಣಾದರು. ಕೆನ್‌ಬೆರಾದಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಸುಮಿತ್ ನಗಾಲ್ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು. ಅಮೆರಿಕದ ಪ್ಯಾಟ್ರಿಕ್ ಕಿಪ್ಸನ್ 2–6, 6–4, 6–1 ರಿಂದ ನಗಾಲ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.