ನೊವಾಕ್ ಜೊಕೊವಿಚ್
(ಚಿತ್ರ ಕೃಪೆ: ಫ್ರೆಂಚ್ ಓಪನ್)
ಪ್ಯಾರಿಸ್: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಹುಡುಕಾಟದಲ್ಲಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್, ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆರನೇ ಶ್ರೇಯಾಂಕಿತ ಜೊಕೊವಿಚ್ ಅವರು, ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 4-6, 6-3, 6-2, 6-4ರ ಅಂತರದಲ್ಲಿ ಗೆದ್ದು ಮುನ್ನಡೆದರು.
ಆ ಮೂಲಕ 13ನೇ ಸಲ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಚ್ ಅವರಿಗೆ ಅಗ್ರ ಶ್ರೇಯಾಂಕಿತ ಇಟಲಿಯ ಯಾನಿಕ್ ಸಿನ್ನರ್ ಸವಾಲು ಎದುರಾಗಲಿದೆ.
ರಾಲೆಂಡ್ ಗ್ಯಾರೋಸ್ ಅಂಗಣದಲ್ಲಿ ಈಗಾಗಲೇ 100 ಗೆಲುವುಗಳ ಸಾಧನೆ ಮೆರೆದಿರುವ 38 ವರ್ಷದ ಜೊಕೊವಿಚ್, ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
2016, 2021 ಹಾಗೂ 2023ನೇ ಸಾಲಿನಲ್ಲಿ ಜೊಕೊವಿಚ್, ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದರು.
'ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರನ ಸವಾಲು ಎದುರಾಗುತ್ತಿದೆ. ಸಿನ್ನರ್ ಅತ್ಯುತ್ತಮ ಆಟಗಾರನಾಗಿದ್ದು, ಕಳೆದೆರಡು ವರ್ಷಗಳಿಂದ ಉತ್ತಮ ನಿರ್ವಹಣೆ ನೀಡಿದ್ದಾರೆ. ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸಲಿದ್ದೇನೆ' ಎಂದು ಗೆಲುವಿನ ಬಳಿಕ ಜೊಕೊವಿಚ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.