ADVERTISEMENT

ಎಟಿಪಿ ರ್‍ಯಾಂಕಿಂಗ್‌: ಅಗ್ರಸ್ಥಾನಕ್ಕೆ ಮರಳಿದ ನೊವಾಕ್‌ ಜೊಕೊವಿಚ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 6:35 IST
Last Updated 4 ಏಪ್ರಿಲ್ 2023, 6:35 IST
ನೊವಾಕ್‌ ಜೊಕೊವಿಚ್‌
ನೊವಾಕ್‌ ಜೊಕೊವಿಚ್‌   

ಪ್ಯಾರಿಸ್‌: ಅನುಭವಿ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಸೋಮವಾರ ಪ್ರಕಟಗೊಂಡ ಎಟಿಪಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಕೋವಿಡ್‌ ಲಸಿಕೆ ಪಡೆಯದ್ದಕ್ಕೆ, ಕಳೆದ ತಿಂಗಳು ಅಮೆರಿಕದ ಕೆಲವು ಟೂರ್ನಿಗಳನ್ನು ಕಳೆದುಕೊಂಡಿದ್ದರ ಹೊರತಾಗಿಯೂ ಸರ್ಬಿಯಾದ ಆಟಗಾರನಿಂದ ಈ ಸಾಧನೆ ದಾಖಲಾಗಿದೆ.

ಕಳೆದ ತಿಂಗಳು, ಇಂಡಿಯನ್‌ ವೆಲ್ಸ್‌ ಟೂರ್ನಿಯಲ್ಲಿ ಗೆದ್ದ ನಂತರ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಕೆಲದಿನಗಳ ಕಾಲ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಆದರೆ ಶುಕ್ರವಾರ ಅವರು ಮಿಯಾಮಿ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಹೊರಬಿದ್ದ ಕಾರಣ, ಜೊಕೊವಿಚ್‌ಗೆ ದಾಖಲೆಯ 380ನೇ ವಾರ ಅಗ್ರಸ್ಥಾನಕ್ಕೆ ಬರಲು ಸಾಧ್ಯವಾಗಿದೆ.

ADVERTISEMENT

ಜೊಕೊವಿಚ್‌ (7,160) ಅವರು ಅಲ್ಕರಾಜ್‌ (6,780) ಅವರಿಗಿಂತ 380 ಪಾಯಿಂಟ್‌ ಮುಂದಿದ್ದಾರೆ.

ಅವರಿಗಿಂತ ಒಂದು ಸಾವಿರ ಪಾಯಿಂಟ್ಸ್‌ಗೂ ಹೆಚ್ಚು ಹಿಂದೆಯಿರುವ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌ (5,770) ಮೂರನೇ ಸ್ಥಾನದಲ್ಲಿದ್ದಾರೆ. ಡೇನಿಯಲ್‌ ಮೆಡ್ವೆಡೆವ್‌ (5,150) ಮತ್ತು ನಾರ್ವೆಯ ಕ್ಯಾಸ್ಪರ್‌ ರೂಡ್‌ (5,005) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.