ADVERTISEMENT

ಯುದ್ಧಪೀಡಿತ ಉಕ್ರೇನ್ ಮಕ್ಕಳಿಗೆ ಫೆಡರರ್ ಸಹಾಯಹಸ್ತ

ಏಜೆನ್ಸೀಸ್
Published 18 ಮಾರ್ಚ್ 2022, 18:01 IST
Last Updated 18 ಮಾರ್ಚ್ 2022, 18:01 IST
ರೋಜರ್ ಫೆಡರರ್
ರೋಜರ್ ಫೆಡರರ್   

ಲಂಡನ್: ರಷ್ಯಾದ ದಾಳಿಯಿಂದಾಗಿ ನಲುಗಿರುವ ಉಕ್ರೇನ್ ದೇಶದ ಮಕ್ಕಳಿಗೆ ಟೆನಿಸ್ ದಿಗ್ಗಜ ಸಹಾಯಹಸ್ತ ಚಾಚಿದ್ದಾರೆ.

‘ಯುದ್ಧಪೀಡಿತ ಉಕ್ರೇನಿನ ಮಕ್ಕಳ ಶಿಕ್ಷಣ ಮುಂದುವರಿಯಲು ನಮ್ಮ ಸಂಸ್ಥೆಯಿಂದ ₹ 3.8 ಕೋಟಿದೇಣಿಗೆ ನೀಡಲಾಗಿದೆ’ ಎಂದು ಸ್ವಿಟ್ಜರ್‌ಲೆಂಡ್‌ ಟೆನಿಸ್ ತಾರೆ ಫೆಡರರ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

‘ಉಕ್ರೇನ್‌ನ ಸದ್ಯದ ಪರಿಸ್ಥಿತಿಯ ದೃಶ್ಯಗಳನ್ನು ನೋಡಿ ನಾನು ಮತ್ತು ಕುಟುಂಬ ಭಯಭೀತರಾದೆವು. ಅಲ್ಲಿಯ ಅಮಾಯಕ ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಊಹಿಸಿಕೊಂಡರೇ ಸಂಕಟವಾಗುತ್ತದೆ. ನಾವು ಶಾಂತಿ ಪರವಾಗಿ ನಿಲ್ಲಬೇಕಿದೆ’ ಎಂದೂ ಫೆಡರರ್ ಬರೆದಿದ್ದಾರೆ. 40 ವರ್ಷದ ಫೆಡರರ್ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

ADVERTISEMENT

ಬ್ರಿಟನ್ ಟೆನಿಸ್ ತಾರೆ ಆ್ಯಂಡಿ ಮರೆ ಈಚೆಗೆ ತಾವು ಈ ವರ್ಷ ಆಡುವ ಟೂರ್ನಿಗಳಲ್ಲಿ ಪಡೆಯುವ ಬಹುಮಾನ ಮೊತ್ತವನ್ನು ಉಕ್ರೇನ್ ಸಂತ್ರಸ್ತರ ನಿಧಿಗೆ ನೀಡುವುದಾಗಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.