ಹಫೀಜ್ ಕ್ಲೀನ್ ಬೌಲ್ಡ್ ಮಾಡಿದ್ದ ವಿರಾಟ್ ಕೊಹ್ಲಿ
ಚಿತ್ರ ಕೃಪೆ (X/@MichaelVaughan)
ಬೆಂಗಳೂರು: ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ ಕಾಲೆಳೆಯಲು ಯತ್ನಿಸಿದ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಅವರನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಕ್ಲೀನ್ ಬೌಲ್ಡ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಸ್ವಾರ್ಥಿ, ವೈಯಕ್ತಿಕ ದಾಖಲೆಗಾಗಿ (ಶತಕ) ಆಡುತ್ತಾರೆ ಎಂದು ಹೇಳಿ ಪೇಚಿಗೆ ಸಿಲುಕಿದ್ದ ಹಫೀಜ್, ಬೆನ್ ಸ್ಟೋಕ್ಸ್ ಬಿರುಸಿನ ಶತಕ ಗಳಿಸಿರುವುದನ್ನು ಉಲ್ಲೇಖಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು.
ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲೂ ಆಕ್ರಣಕಾರಿ ಆಟದ ಅಗತ್ಯವಿದ್ದ ಸಂದರ್ಭದಲ್ಲಿ ಸಮಯೋಚಿತ ಇನಿಂಗ್ಸ್ ಕಟ್ಟುವ ಮೂಲಕ ಶತಕ ಗಳಿಸಿದ ಸ್ಟೋಕ್ಸ್ ತಂಡದ ಗೆಲುವಿಗೆ ಕಾರಣರಾದರು. ಸ್ವಾರ್ಥ ಮತ್ತು ನಿಸ್ವಾರ್ಥಕ್ಕೆ ಇದುವೇ ಸರಿಯಾದ ಉದಾಹರಣೆ ಎಂದು ಮೈಕಲ್ ವಾನ್ ಅವರಿಗೆ ಹಫೀಜ್ ಟ್ಯಾಗ್ ಮಾಡಿ ಹೇಳಿದರು.
ಇದಕ್ಕೆ ಉತ್ತರಿಸಿದ ವಾನ್, ಸ್ಟೋಕ್ಸ್ ಶ್ರೇಷ್ಠ ಇನಿಂಗ್ಸ್ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ವಿರಾಟ್, ಕೋಲ್ಕತ್ತದ ಕಠಿಣ ಪಿಚ್‌ನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿಯ ವಿರುದ್ಧ ರನ್ ಗಳಿಸಿದರು ಎಂದು ವಿವರಣೆ ನೀಡಿದರು.
ಹಫೀಜ್ ಅವರನ್ನು ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಮಾಡಿದ್ದರು. ಅದಕ್ಕಾಗಿಯೇ ನಿರಂತರವಾಗಿ ವಿರಾಟ್ ಅವರನ್ನು ಕಾಡುತ್ತಿರಬಹುದೇ ಎಂದು ಮಗದೊಂದು ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.