ADVERTISEMENT

50 ಶತಕ ಗಳಿಸುವುದು ರೋಹಿತ್ ಪಾಲಿಗೆ ದೊಡ್ಡ ವಿಷಯವೇನಲ್ಲ: ಅಖ್ತರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2023, 9:04 IST
Last Updated 17 ನವೆಂಬರ್ 2023, 9:04 IST
<div class="paragraphs"><p>ರೋಹತ್ ಶರ್ಮಾ</p></div>

ರೋಹತ್ ಶರ್ಮಾ

   

(ಪಿಟಿಐ ಚಿತ್ರ)

ಬೆಂಗಳೂರು: ಇಡೀ ಕ್ರಿಕೆಟ್ ಜಗತ್ತು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ ಸಾಧನೆಯನ್ನು ಕೊಂಡಾಡುತ್ತಿದೆ. ಆದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಲಿಗೆ 50 ಶತಕ ಗಳಿಸುವುದು ದೊಡ್ಡ ವಿಷಯವೇನಲ್ಲ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಹೇಳಿದ್ದಾರೆ.

ADVERTISEMENT

ಆರಂಭಿಕನಾಗಿ ಕ್ರೀಸಿಗಿಳಿದು ಎದುರಾಳಿ ತಂಡದ ಯೋಜನೆಯನ್ನೆಲ್ಲ ರೋಹಿತ್ ಬುಡಮೇಲುಗೊಳಿಸುತ್ತಾರೆ. ಹಿಟ್‌ಮ್ಯಾಟ್ ಸಂಪೂರ್ಣವಾದ ಟೀಮ್ ಪ್ಲೇಯರ್ ಎಂದು ಅಖ್ತರ್ ಶ್ಲಾಘನೆ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಭಾರತ ಅದ್ಭುತ ಜಯ ಗಳಿಸಿದೆ. ನಮಗೆ ಟ್ರೆಂಟ್ ಬೋಲ್ಟ್ ಅವರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆಯೇ ? ಮಿಚೆಲ್ ಸ್ಯಾಂಟ್ನರ್ ಸಮಸ್ಯೆ ಸೃಷ್ಟಿಸುತ್ತಾರೆಯೇ ? ಸರಿ ಅವರನ್ನು ನಾನು ನೋಡಿಕೊಳ್ಳುತ್ತೇನೆ ಎಂದು ರೋಹಿತ್ ಅವರ ಆಕ್ರಮಣಕಾರಿ ಆಟದ ಮನೋಭಾವದ ಕುರಿತು ಅಖ್ತರ್ ವಿವರಿಸಿದ್ದಾರೆ.

ರೋಹಿತ್‌ಗೆ ಹೆಚ್ಚು ಶತಕ ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ರೋಹಿತ್ ಬಯಸಿದ್ದಲ್ಲಿ ಈ ವಿಶ್ವಕಪ್‌ನಲ್ಲಿ ಸುಲಭವಾಗಿ 5-6 ಶತಕಗಳನ್ನು ಗಳಿಸಬಹುದಿತ್ತು. ಏಕದಿನದಲ್ಲಿ 50 ಶತಕಗಳನ್ನು ಗಳಿಸಬಹುದು. ಈಗಲೂ ಅವರಿಂದ ಸಾಧ್ಯ. ಅದೇನು ದೊಡ್ಡ ವಿಷಯವೇನಲ್ಲ. ಓರ್ವ ಬ್ಯಾಟರ್ ಹಾಗೂ ನಾಯಕರಾಗಿ ರೋಹಿತ್ ಅದ್ಭುತ ಎಂದು ಅಖ್ತರ್ ಹೊಗಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕ ಗಳಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮೀರಿ ನಿಂತಿರುವ ವಿರಾಟ್ ಕೊಹ್ಲಿ ಅವರನ್ನು ಅಖ್ತರ್ ಅಭಿನಂದಿಸಿದ್ದಾರೆ. ತಮ್ಮ ಹೀರೊ ಸಚಿನ್ ಸಮ್ಮುಖದಲ್ಲೇ ವಿರಾಟ್ ಈ ಸಾಧನೆ ಮಾಡಿದ್ದಾರೆ. ಅವರ ಬಗ್ಗೆಯೂ ನನಗೆ ಖುಷಿಯಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.