ADVERTISEMENT

CWC 2023 | IND vs BAN: ಹಾರ್ದಿಕ್ ಪಾಂಡ್ಯಗೆ ಗಾಯ; ಬೌಲಿಂಗ್ ಮಾಡಿದ ವಿರಾಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2023, 9:47 IST
Last Updated 19 ಅಕ್ಟೋಬರ್ 2023, 9:47 IST
<div class="paragraphs"><p>ಹಾರ್ದಿಕ್ ಪಾಂಡ್ಯ</p></div>

ಹಾರ್ದಿಕ್ ಪಾಂಡ್ಯ

   

(ಪಿಟಿಐ ಚಿತ್ರ)

ಪುಣೆ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದ ವೇಳೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಇನಿಂಗ್ಸ್‌ನ ಒಂಬತ್ತನೇ ಓವರ್‌ನ ಮೂರನೇ ಎಸೆತದಲ್ಲಿ ಘಟನೆ ನಡೆಯಿತು. ಹಾರ್ದಿಕ್ ಪಾಂಡ್ಯ ದಾಳಿಯಲ್ಲಿ ಬಾಂಗ್ಲಾ ಬ್ಯಾಟರ್ ಲಿಟನ್ ದಾಸ್ ಸ್ಟ್ರೇಟ್ ಡ್ರೈವ್ ಹೊಡೆದರು. ಈ ವೇಳೆ ಕಾಲಿನಲ್ಲಿ ಚೆಂಡನ್ನು ತಡೆಯಲು ವಿಫಲ ಯತ್ನ ನಡೆಸಿದ ಹಾರ್ದಿಕ್ ಪಾಂಡ್ಯ ಎಡವಿ ಬಿದ್ದರು. ಚೆಂಡು ಬೌಂಡರಿ ಗೆರೆ ದಾಟಿತು.

ನೋವು ತಡೆಯಲಾರದೇ ಕುಂಟುತ್ತಾ ಸಾಗಿದ ಹಾರ್ದಿಕ್ ಪಾಂಡ್ಯ ಅವರಿಗೆ ಫಿಸಿಯೊ ನೆರವನ್ನು ಒದಗಿಸಲಾಯಿತು. ಇದರಿಂದ ಸ್ವಲ್ಪ ಹೊತ್ತು ಪಂದ್ಯಕ್ಕೆ ಅಡ್ಡಿಯಾಯಿತು. ಅಂತಿಮವಾಗಿ ಬೌಲಿಂಗ್ ಮುಂದುವರಿಸಲಾಗದೇ ಮೈದಾನದಿಂದ ಹೊರಗೆ ನಡೆದರು.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಗಾಯದ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಬರಬೇಕಿದೆ. ಬಳಿಕ ಚೆಂಡು ಕೈಗೆತ್ತಿಕೊಂಡ ವಿರಾಟ್ ಕೊಹ್ಲಿ 9ನೇ ಓವರ್ ಪೂರ್ಣಗೊಳಿಸಲು ನೆರವಾದರು.

ಪಾಂಡ್ಯ ಮೂರು ಎಸೆತಗಳಲ್ಲಿ ಎರಡು ಬೌಂಡರಿ ಬಿಟ್ಟುಕೊಟ್ಚು ದುಬಾರಿಯೆನಿಸಿದರು. ಉಳಿದ ಮೂರು ಎಸೆತಗಳಲ್ಲಿ ವಿರಾಟ್ ಎರಡು ರನ್ ಮಾತ್ರ ಬಿಟ್ಟುಕೊಟ್ಟರು.

ಈ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಶಕಿಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ತಂಡವನ್ನು ನಜ್ಮುಲ್ ಹೊಸೇನ್ ಶಾಂತೊ ಮುನ್ನಡೆಸುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಸ್ಕ್ಯಾನಿಂಗ್...

ಎಡಗಾಲಿಗೆ ಗಾಯಮಾಡಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಸ್ಕ್ಯಾನಿಂಗ್ ನಡೆಸಲು ಕರೆದೊಯ್ಯಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ನೀಡಿದೆ.

ವಿರಾಟ್ ಕೊಹ್ಲಿ ಬೌಲಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.