ADVERTISEMENT

ಭಾರತವನ್ನು ಸೋಲಿಸಿದರೆ ಬಾಂಗ್ಲಾ ಆಟಗಾರರೊಂದಿಗೆ 'ಡೇಟ್' ಮಾಡುವೆ: ಪಾಕಿಸ್ತಾನ ನಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2023, 7:44 IST
Last Updated 19 ಅಕ್ಟೋಬರ್ 2023, 7:44 IST
<div class="paragraphs"><p>ಪಾಕಿಸ್ತಾನ ನಟಿ&nbsp;ಸೆಹರ್‌ ಶಿನ್ವಾರಿ</p></div>

ಪಾಕಿಸ್ತಾನ ನಟಿ ಸೆಹರ್‌ ಶಿನ್ವಾರಿ

   

ಚಿತ್ರ: ಎಕ್ಸ್

ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಎದುರು ಗೆದ್ದರೆ ಬಾಂಗ್ಲಾದೇಶ ತಂಡದ ಆಟಗಾರರೊಂದಿಗೆ ಡೇಟ್‌ ಮಾಡುವುದಾಗಿ ಪಾಕಿಸ್ತಾನ ನಟಿ ಸೆಹರ್‌ ಶಿನ್ವಾರಿ ಹೇಳಿಕೊಂಡಿದ್ದಾರೆ.

ADVERTISEMENT

ಭಾರತ ಹಾಗೂ ಬಾಂಗ್ಲಾದೇಶ ಇಂದು (ಗುರುವಾರ, ಅಕ್ಟೋಬರ್ 19) ಪುಣೆಯಲ್ಲಿ ಮುಖಾಮುಖಿಯಾಗಲಿವೆ. ಪಾಕಿಸ್ತಾನ ತಂಡ ಈಗಾಗಲೇ ಭಾರತದ ಎದುರು ಸೋಲು ಕಂಡಿದೆ. ಹೀಗಾಗಿ ಬಾಂಗ್ಲಾ ತಂಡವಾದೂ ಟೀಂ ಇಂಡಿಯಾ ಎದುರು ಗೆಲ್ಲಲಿ ಎಂಬುದು ಶಿನ್ವಾರಿ ಬಯಕೆ. ಈ ಹಿನ್ನೆಲೆಯಲ್ಲಿ ಅವರು ಟ್ವೀಟ್‌ ಮಾಡಿದ್ದಾರೆ.

ಬಾಂಗ್ಲಾದೇಶ ತಂಡ ಮುಂದಿನ ಪಂದ್ಯದಲ್ಲಿ ಮುಯ್ಯಿ ತೀರಿಸಿಕೊಳ್ಳಲಿ. ಬಾಂಗ್ಲಾ ಆಟಗಾರರೇನಾದರೂ ಭಾರತವನ್ನು ಮಣಿಸಿದರೆ ಢಾಕಾಗೆ ತೆರಳಿ, ಅವರೊಂದಿಗೆ ಡೇಟ್‌ ಮಾಡುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

2007ರಲ್ಲಿ ಅಚ್ಚರಿಯ ಫಲಿತಾಂಶ
ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಈಗಾಗಲೇ ಎರಡು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸಾಧಾರಣ ತಂಡವೆನಿಸಿರುವ ಅಫ್ಗಾನಿಸ್ತಾನ ಸೋಲುಣಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಬೃಹತ್‌ ಮೊತ್ತ ಗಳಿಸಿ ಅಬ್ಬರಿಸಿದ್ದ ಬಲಿಷ್ಠ ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್ ನೀಡಿದ್ದ ಸುಲಭ ಗುರಿ ಮುಟ್ಟಲಾರದೆ ತತ್ತರಿಸಿದೆ. ಹೀಗಾಗಿ ಯಾವ ತಂಡವನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ.

ಅಫ್ಗನ್ ಮತ್ತು ನೆದರ್ಲೆಂಡ್ಸ್ ತಂಡಗಳಿಗೆ ಹೋಲಿಸಿದರೆ ಬಾಂಗ್ಲಾದೇಶ ತಂಡಕ್ಕೆ ಹೆಚ್ಚು ಅನುಭವ ಇದೆ. ಯಾವುದೇ ತಂಡಕ್ಕೆ ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯವನ್ನೂ ಹೊಂದಿದೆ. ಅಷ್ಟೇ ಅಲ್ಲ, 2007ರ ವಿಶ್ವಕಪ್‌ ಟೂರ್ನಿಯಲ್ಲಿ ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌ ಅವರಂತಹ ದಿಗ್ಗಜ ಆಟಗಾರರಿದ್ದ ತಂಡಕ್ಕೆ ಸೋಲುಣಿಸಿದ ದಾಖಲೆಯನ್ನೂ ಇಟ್ಟುಕೊಂಡಿದೆ. ಹೀಗಾಗಿ ರೋಹಿತ್‌ ಶರ್ಮಾ ಪಡೆ ಎಚ್ಚರಿಕೆಯ ಆಟವಾಡುವುದು ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.