ADVERTISEMENT

ಹರಿಣಗಳ ಎದುರು ಮಂಡಿಯೂರಿದ ವಿಂಡೀಸ್: ಭಾರತದ ಸೆಮಿಫೈನಲ್ ಹಾದಿ ಸುಗಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 12:58 IST
Last Updated 26 ಫೆಬ್ರುವರಿ 2026, 12:58 IST
<div class="paragraphs"><p>ದಕ್ಷಿಣ ಆಫ್ರಿಕಾ</p></div>

ದಕ್ಷಿಣ ಆಫ್ರಿಕಾ

   

ಐಸಿಸಿ ಚಿತ್ರ

ಅಹಮದಾಬಾದ್: ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳಿಂದ ಸೋಲಿಸಿತು.

ADVERTISEMENT

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡು ವಿಂಡೀಸ್‌ ಅನ್ನು ನಿಗದಿತ 20 ಓವರ್‌ನಲ್ಲಿ 176 ರನ್‌ಗಳಿಗೆ ಕಟ್ಟಿಹಾಕಿತು.

ನಂತರ ಬ್ಯಾಟ್‌ ಮಾಡಿದ ಆಫ್ರಿಕಾ 1 ವಿಕೆಟ್‌ ಕಳೆದುಕೊಂಡು 29 ಬಾಲ್‌ಗಳು ಬಾಕಿ ಇರುವಂತೆ ಭರ್ಜರಿ ಗೆಲುವು ದಾಖಲಿಸಿತು.

ಈ ಫಲಿಂತಾಂಶದ ಮೂಲಕ ಭಾರತದ ಸೆಮಿಫೈನಲ್ ಹಾದಿ ಸುಗಮವಾದಂತಾಗಿದೆ. 

ಭಾರತ ವೆಸ್ಟ್‌ ಇಂಡೀಸ್‌ ಹಾಗೂ ಜಿಂಬಾಬ್ವೆ ತಂಡಗಳನ್ನು ಮಣಿಸಿದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ರನ್‌ರೇಟ್‌ ಇಲ್ಲದೆ ಈ ಎರಡು ಪಂದ್ಯಗಳನ್ನು ಭಾರತ ಗೆದ್ದರೆ ಸಾಕು ಸೆಮಿಫೈನಲ್‌ಗೆ ಹೋಗಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭದಲ್ಲಿ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್ ಕಚ್ಚಿ ಆಡಲಿಲ್ಲ. ಅಗ್ರಕ್ರಮಾಂಕದ ಬ್ಯಾಟರ್‌ಗಳ ನೀರಸ ಪ್ರದರ್ಶನದಿಂದಾಗಿ ವಿಂಡೀಸ್ ತಂಡ ಒಂದು ಹಂತದಲ್ಲಿ 7 ವಿಕೆಟ್ ಕಳೆದುಕೊಂಡು 84 ರನ್ ಕಲೆಹಾಕಿತ್ತು. ಆದರೆ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ರೊಮಾರಿಯೊ ಶೆಫರ್ಡ್ ಹಾಗೂ ಜೇಸನ್ ಹೋಲ್ಡರ್ ಜೋಡಿಯು ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಾಡಿದರು.

8ನೇ ವಿಕೆಟ್‌ಗೆ ಜೊತೆಯಾದ ಈ ಜೋಡಿ 90 ರನ್‌ಗಳ ಜೊತೆಯಾಟ ಆಡಿದರು. ಈ ವೇಳೆ, ಜೇಸನ್ ಹೋಲ್ಡರ್ (49 ರನ್, 31ಎ, 4X4, 6X3) ಹಾಗೂ ರೊಮಾರಿಯೊ ಶೆಫರ್ಡ್ (ಅಜೇಯ 52ರನ್, 37ಎ, 3X4, 4X4) ಕಲೆಹಾಕುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ 177 ರನ್ ಗುರಿ ನೀಡಿದರು.

ಬ್ಯಾಟಿಂಗ್‌ ಆರಂಭಿಸಿದ ದ. ಆಫ್ರಿಕಾ ಕೇವಲ ಒಂದು ವಿಕೆಟ್‌ ಕಳೆದುಕೊಂಡು 16.1 ಓವರ್‌ನಲ್ಲಿ ಗೆಲುವಿನ ದಡ ಸೇರಿತು. ಆಫ್ರಿಕಾ ಪರ ನಾಯಕ ಮರ್ಕರಂ 82 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಡಿ.ಕಾಕ್‌ 47 ರನ್‌ ಬಾರಿಸಿ ಚೇಸ್‌ಗೆ ವಿಕೆಟ್‌ ಒಪ್ಪಿಸಿದರು. ರಿಕಾಲ್ಟನ್‌ 54 ರನ್‌ ಹೊಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.