ADVERTISEMENT

ಚೀನಾದ ಡೀಪ್‌ಸೀಕ್‌ನಿಂದ R1 ಅಪ್‌ಡೇಟ್ ಬಿಡುಗಡೆ; ತಪ್ಪು ಮಾಹಿತಿ ಶೇ 50ರಷ್ಟು ಕಡಿತ

ರಾಯಿಟರ್ಸ್
Published 29 ಮೇ 2025, 16:17 IST
Last Updated 29 ಮೇ 2025, 16:17 IST
ಡೀಪ್‌ಸೀಕ್‌
ಡೀಪ್‌ಸೀಕ್‌   

ಬೀಜಿಂಗ್: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಮೆರಿಕದ ಓಪನ್‌ಎಐ ಪ್ರತಿಸ್ಪರ್ಧಿ ಹಾಗೂ ಕಡಿಮೆ ಖರ್ಚಿನಲ್ಲಿ ಚೀನಾ ಅಭಿವೃದ್ಧಿಪಡಿಸಿದ ಡೀಪ್‌ಸೀಕ್‌ ಎಐ ತನ್ನ ಆರ್‌1 ಮಾದರಿಗೆ ಗುರುವಾರ ಅಪ್‌ಡೇಟ್ ಬಿಡುಗಡೆ ಮಾಡುವ ಮೂಲಕ, ತನ್ನ ಸ್ಪರ್ಧೆಯನ್ನು ತೀವ್ರಗೊಳಿಸಿದೆ.

ಡೀಪ್‌ಸೀಕ್‌ನ ಆರ್‌1 ಮಾದರಿಗೆ R1-0528 ಎಂಬ ಅಪ್‌ಡೇಟ್‌ ಅನ್ನು ಬಿಡುಗಡೆ ಮಾಡಿದೆ. ಆ ಮೂಲಕ ತಾರ್ಕಿಕ ಮತ್ತು ನಿರ್ಣಾಯಕ ಸಾಮರ್ಥ್ಯವನ್ನು ಡೀಪ್‌ಸೀಕ್ ಹೆಚ್ಚಿಸಿಕೊಂಡಿದೆ. ಆ ಮೂಲಕ ಓಪನ್‌ಎಐನ ಒ3 ಮಾದರಿ ಮತ್ತು ಗೂಗಲ್‌ ಜೆಮಿನಿ 2.5 ಪ್ರೊ ಸರಿಸಮಾನಕ್ಕೆ ತನ್ನ ತಂತ್ರಾಂಶವನ್ನು ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಡೀಪ್‌ಸೀಕ್‌ ಕಳೆದ ಜನವರಿಯಲ್ಲಿ ತನ್ನ ಆರ್‌1 ಮಾದರಿಯನ್ನು ಬಿಡುಗಡೆ ಮಾಡಿದ್ದು, ತಂತ್ರಜ್ಞಾನ ಜಗತ್ತಿನಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು. ಅಲ್ಲಿಯವರೆಗೂ ಕೃತಕ ಬುದ್ಧಿಮತ್ತೆ ಎಂದರೆ ಅಪಾರ ಖರ್ಚು ಮತ್ತು ದುಬಾರಿ ತಂತ್ರಜ್ಞಾನ ಎಂದೇ ಭಾವಿಸಲಾಗಿತ್ತು. ಆರ್‌1 ಬಿಡುಗಡೆ ನಂತರ ಚೀನಾದ ಅಲಿಬಾಬಾ ಮತ್ತು ಟೆನ್ಸೆಂಟ್‌ ಕಂಪನಿಗಳು ಡೀಪ್‌ಸೀಕ್‌ ಅನ್ನೇ ಮೀರಿಸುವ ಮಾದರಿಯನ್ನು ಅಭಿವೃದ್ಧಿಪಡಿಸಿದವು.

ADVERTISEMENT

R1-0528 ಅಪ್‌ಡೇಟ್‌ನಲ್ಲಿ ಯಾವುದೆ ಮಾಹಿತಿಯ ಮರು ಬರವಣಿಗೆ ಮತ್ತು ಮಾಹಿತಿಯನ್ನು ಸಂಕ್ಷಿಪ್ತಗೊಳಿಸುವ ಸುಳ್ಳು ಹಾಗೂ ದಾರಿತಪ್ಪಿಸುವ ಮಾಹಿತಿಗಳ ಪ್ರಮಾಣ ಶೇ 45ರಿಂದ 50ರಷ್ಟು ಕಡಿಮೆಯಾಗಿದೆ. ಇದರಿಂದ ಪ್ರಬಂಧ, ಕಾದಂಬರಿ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳನ್ನು ಇನ್ನಷ್ಟು ಕ್ರಿಯಾಶೀಲವಾಗಿ ಬರೆಯಬಹುದು. ಗಣಿತ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಹಾಗೂ ಕೋಡಿಂಗ್‌ ಕೂಡಾ ಹೊಸ ಮಾದರಿ ಮೂಲಕ ಸುಲಭವಾಗಿದೆ ಎಂದು ಡೀಪ್‌ಸೀಕ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.