
ವಾಷಿಂಗ್ ಮೆಷಿನ್
ಬಟ್ಟೆ ಒಗೆಯುವುದು ನಮ್ಮ ದೈನಂದಿನ ಕೆಲಸದ ಭಾಗವಾದರೂ ಸಮಯದ ಉಳಿತಾಯದ ನಿಟ್ಟಿನಲ್ಲಿ ಮನೆಯಲ್ಲಿ ವಾಷಿಂಗ್ ಮಷೀನ್ ಅನುಕೂಲಕರವೇ.
ಮಹಿಳೆಯರ ಮನದಿಂಗಿತ ಅರಿತ ಕೆಲ ಕಂಪನಿಗಳು ಅತ್ಯಾಧುನಿಕ ಸೌಲಭ್ಯಗಳ ವಾಷಿಂಗ್ ಮಷೀನ್‌ಗಳನ್ನು ಮಾರುಕಟ್ಟೆಗೆ ತಂದಿವೆ. ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಹೊರ ತಂದಿರುವ ಏಸರ್‌ನ ಬ್ಲಾಕ್ ಡೆಕರ್ ವಾಷಿಂಗ್ ಮಷೀನ್, ಎ.ಐ .ಆಧಾರಿತವಾಗಿದ್ದು, ವಿಶಿಷ್ಟವಾದ ಫೀಚರ್‌ಗಳನ್ನು ಹೊಂದಿವೆ. ಈ ವಾಷಿಂಗ್ ಮಷೀನ್ ಸಂಪೂರ್ಣ ಸ್ವಯಂಚಾಲಿತ, ಟಾಪ್-ಲೋಡಿಂಗ್ ಮತ್ತು ಫ್ರಂಟ್-ಲೋಡಿಂಗ್ ವಿಧಗಳಲ್ಲಿ ಲಭ್ಯ. ವಿವಿಧ ಸಾಮರ್ಥ್ಯಗಳಲ್ಲಿ ಸಿಗುವ ಈ ಬಟ್ಟೆ ಒಗೆಯುವ ಯಂತ್ರದಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿರುವ 7 ಕೆ.ಜಿ. ಟಾಪ್ ಲೋಡ್ ಮಾದರಿ ಬಳಕೆದಾರಸ್ನೇಹಿಯಾಗಿದೆ. ವಿನ್ಯಾಸ ಸೊಗಸಾಗಿದೆ, ಗಾತ್ರದಲ್ಲಿ ಚಿಕ್ಕದಿದ್ದು, ಕಡಿಮೆ ಜಾಗದಲ್ಲಿ ಇಟ್ಟುಕೊಳ್ಳಬಹುದು. ವಿದ್ಯುತ್ ದಕ್ಷತೆಯನ್ನೂ ಒದಗಿಸುತ್ತದೆ. ಆಟೊ ಪವರ್ ಆಫ್ ವ್ಯವಸ್ಥೆಯಿದೆ.
ಈ ವಾಷಿಂಗ್ ಮಷೀನ್ 6.5 ಕೆಜಿ, 7 ಕೆ.ಜಿ ಮತ್ತು8 ಕೆ.ಜಿ ಸಾಮರ್ಥ್ಯಗಳಲ್ಲಿ ಲಭ್ಯ ಸಿಗುತ್ತದೆ. ಫ್ರಂಟ್ ಲೋಡಿಂಗ್ ಮಾದರಿಯಲ್ಲಿ ಇನ್-ಬಿಲ್ಟ್ ಹೀಟರ್ ವ್ಯವಸ್ಥೆ ಇದ್ದು, ಸಂಪೂರ್ಣ ಆಟೊಮ್ಯಾಟಿಕ್ ಆಗಿದೆ. Amazon.in, Bajaj Finserv ಮತ್ತು Dealsmagnet.com ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯ. ಬೆಲೆ ಮಾದರಿಗೆ ಅನುಗುಣವಾಗಿ ₹ 17,000, ₹ 22,000 ಸಾವಿರ . ಎರಡು ವರ್ಷ ವಾರಂಟಿ, ಹತ್ತು ವರ್ಷಗಳ ಮೋಟಾರ್ ವಾರಂಟಿಯನ್ನು ವಾಷಿಂಗ್ ಮಷೀನ್ ಹೊಂದಿದೆ.
ಆಧುನಿಕ ಮನೆಗಳಿಗೆ ಅತ್ಯಾಧುನಿಕವಾದ ಟಿ.ವಿ., ಫ್ರಿಜ್ ಮುಂತಾದ ಉತ್ಪನ್ನಗಳೇ ಬೇಕು. ಮನೆಯ ಒಳಾಂಗಣ ವಿನ್ಯಾಸ ಆಕರ್ಷಕವಾಗಿರುವಾಗ ಇದಕ್ಕೆ ತಕ್ಕುದಾದ ಟಿ.ವಿ. ಇಲ್ಲದಿದ್ದರೆ ಹೇಗೆ? ಬೆಲೆಯೂ ಕಡಿಮೆ ಇರಬೇಕು, ಹೊಸ ಹಾಗೂ ವಿಭಿನ್ನ ತಂತ್ರಜ್ಞಾನವನ್ನೊಳಗೊಂಡ ಟಿ.ವಿ.ಯನ್ನು ಬ್ಲಾಕ್ ಡೆಕರ್ ಸುಪ್ರೀಂ ಸೀರೀಸ್ ಅಡಿಯಲ್ಲಿ ಮಾರುಕಟ್ಟೆಗೆ ತಂದಿದೆ. ಫ್ರೇಮ್‌ಲೆಸ್ ಸ್ಲಿಮ್ ಮೆಟಲ್ ಡಿಸೈನ್ ಹೊಂದಿದ್ದು ಇದರ ವಿಶೇಷ. ಇದರಲ್ಲಿನ ಡ್ಯುಯಲ್ ಮೆಟಲ್ ಸ್ಟ್ಯಾಂಡ್ ಮನೆಯ ಕೊಠಡಿಗಳ ಹೊಸ ಲುಕ್ ಕೊಡುತ್ತದೆ. ಕೇವಲ 11.8 ಕೆ.ಜಿ. ತೂಕ ಹೊಂದಿರುವ ಈ ಟಿ.ವಿ.ಯನ್ನು ಗೋಡೆಗೆ ಫಿಕ್ಸ್ ಮಾಡಬಹುದು. ರಿಮೋಟ್ ಸುಂದರವಾಗಿದ್ದು, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೊ, ಯೂಟ್ಯೂಬ್ ಮತ್ತು ಗೂಗಲ್ ಅಸಿಸ್ಟೆನ್ಸ್‌ಗೆ ವಿಶೇಷ ಕೀಗಳನ್ನು ಹೊಂದಿದೆ. ಡಿಸ್‌ಪ್ಲೇ ವಿಷನ್ ಚೆನ್ನಾಗಿದೆ. ಬೆಳಕು ಕಡಿಮೆ ಇರುವ ಕೊಠಡಿಗಳಲ್ಲೂ ದೃಶ್ಯವೈಭವ ಚೆನ್ನಾಗಿ ಕಾಣಿಸುತ್ತದೆ, ಇದಕ್ಕೆ ಕಾರಣ ಇದರ ಎ.ಐ. ಸಾಮರ್ಥ್ಯ. ಆಡಿಯೊ ವ್ಯವಸ್ಥೆ ಅಪೂರ್ವವಾಗಿದ್ದು, ಅದರಂತೆ ಟಿ.ವಿಯನ್ನು ರೂಪಿಸಲಾಗಿದೆ ಎಂಬುದು ಕಂಪನಿ ವಿವರಣೆ.
ಸ್ಮಾರ್ಟ್ ಫೀಚರ್: ಎ.ಐ.ಚಾಲಿತ ಟ್ವಿನ್ ಪ್ರೊಸೆಸರ್ (ಎ 75 + ಎ55), 2 ಜಿಬಿ ರ್‍ಯಾಮ್ ಮತ್ತು 16 ಜಿಬಿ ಸ್ಟೋರೇಜ್ ಲಭ್ಯವಿದೆ.
ಗೂಗಲ್ ಟಿವಿ ಆ್ಯಂಡ್ರಾಯ್ಡ್ 14ನಲ್ಲಿ ಕಾರ್ಯನಿರ್ವಹಿಸುತ್ತದೆ. ನೆಟ್‌ಫ್ಲಿಕ್ಸ್, ಜಿಯೋ ಹಾಟ್ ಸ್ಟಾರ್ ಆ್ಯಪ್‌ಗಳು ಕೇವಲ ಎರಡು ಸೆಕೆಂಡ್‌ಗಳಲ್ಲಿ ತೆರೆದುಕೊಳ್ಳುತ್ತವೆ. 55 ಇಂಚುಗಳ ಕ್ಯುಎಲ್‌ಡಿ ಟಿ.ವಿ. ಬೆಲೆ 44,999 ರೂಪಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.