ADVERTISEMENT

ಈ ವರ್ಷವೇ ಬಿಡುಗಡೆಯಾಗಲಿದೆ ಆ್ಯಪಲ್‌ನ ಮೊದಲ ಫೋಲ್ಡಬಲ್ ಐಫೋನ್; ವಿಶೇಷತೆ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2026, 13:57 IST
Last Updated 24 ಫೆಬ್ರುವರಿ 2026, 13:57 IST
<div class="paragraphs"><p> ಎ.ಐ ಚಿತ್ರ</p></div>

ಎ.ಐ ಚಿತ್ರ

   

ಬೆಂಗಳೂರು: 2026ನೇ ಸಾಲಿನಲ್ಲೇ ಆ್ಯಪಲ್‌ನ ಮೊದಲ ಫೋಲ್ಡಬಲ್ ಐಫೋನ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಸ್ಯಾಮ್‌ಸಂಗ್ ಬಳಿಕ ಮಡಚುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಆ್ಯಪಲ್‌ನ ಐಫೋನ್ ತನ್ನ ಗುಣಮಟ್ಟಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಆಕರ್ಷಕ ವಿನ್ಯಾಸ, ಪ್ರೀಮಿಯಂ ವೈಶಿಷ್ಟ್ಯ, ದೀರ್ಘ ಬ್ಯಾಟರಿ ಬಾಳಿಕೆ, ಕಾರ್ಯಾಚರಣೆಯ ವೇಗ ಹಾಗೂ ಕ್ಯಾಮೆರಾ ಕ್ಲಾರಿಟಿಯಲ್ಲಿ ಯಾವುದೇ ರಾಜಿಗೆ ತಯಾರಾಗಿಲ್ಲ.

ADVERTISEMENT

ಐಫೋನ್ ಫೋಲ್ಡ್

ಆ್ಯಪಲ್‌ನ ಮಡಚುವ ಸ್ಮಾರ್ಟ್‌ಫೋನ್ ಐಫೋನ್ ಫೋಲ್ಡ್ ಎಂದೇ ಹೆಸರಿಸಿಕೊಳ್ಳಲಿದೆ. ಇದು ಪುಸ್ತಕದಂತೆ ತೆರೆದುಕೊಳ್ಳಲಿದೆ. ಅಲ್ಲದೆ ತೆರೆದಾಗ ಮಿನಿ ಟ್ಯಾಬ್ಲೆಟ್ ಶೈಲಿಯನ್ನು ಹೋಲುತ್ತದೆ.

ವಿನ್ಯಾಸ

ಆ್ಯಪಲ್‌ನ ಸಾಮಾನ್ಯ ಐಫೋನ್‌ಗೆ ಹೋಲಿಸಿದಾಗ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ. ಇತರೆ ಆಂಡ್ರಾಯ್ಡ್ ಫೋಲ್ಡಬಲ್ ಫೋನ್‌ಗಿಂತಲೂ ಬಿನ್ನವಾಗಿ ಬಹಳ ವರ್ಷಗಳ ವಿನ್ಯಾಸ ಹಾಗೂ ಮಾರುಕಟ್ಟೆ ವಿಶ್ಲೇಷಣೆಯ ಬಳಿಕ ಸ್ಪರ್ಧಾತ್ಮಕ ಪೋಲ್ಡಬಲ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲು ಆ್ಯಪಲ್ ಸಜ್ಜಾಗಿದೆ.

ಐಫೋನ್ ಫೋಲ್ಡ್ ತುಲನಾತ್ಮಕವಾಗಿ ತೆಳು ಆಗಿರುತ್ತದೆ. ಬಟನ್ ವಿನ್ಯಾಸದಲ್ಲೂ ಬದಲಾವಣೆ ಇರಲಿದೆ.

ಡಿಸ್‌ಪ್ಲೇ

ಮಡಚಿದಾಗ 5.5ರಿಂದ 5.7 ಇಂಚಿನ ಡಿಸ್‌ಪ್ಲೇ ಹಾಗೂ ತೆರೆದಾಗ ಐಪ್ಯಾಡ್‌ಗೆ ಹೋಲುವಂತೆ 7.7ರಿಂದ 7.8 ಇಂಚಿನ ಡಿಸ್‌ಪ್ಲೇ ಇರುವ ಸಾಧ್ಯತೆ ಇದೆ. ಡಿಸ್‌ಪ್ಲೇ ಕ್ಲಾರಿಟಿ ಮೇಲೆ ಯಾವುದೇ ರಾಜಿಗೆ ಆ್ಯಪಲ್ ತಯಾರಾಗಿಲ್ಲ. ಅಲ್ಲದೆ ಗರಿಷ್ಠ ಗುಣಮಟ್ಟತೆಯನ್ನು ಕಾಪಾಡಿಕೊಳ್ಳಲಿದೆ.

ಕ್ಯಾಮೆರಾ, ಬ್ಯಾಟರಿ...

48 ಮೆಗಾಪಿಕ್ಸೆಲ್ ಸೆನ್ಸಾರ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಇತರೆ ಐಫೋನ್‌ಗಳಿಗಿಂತ ಭಿನ್ನವಾಗಿ ಹೆಚ್ಚು ವರ್ಧಿತ ಬ್ಯಾಟರಿ ಬಳಕೆಯಾಗಲಿದೆ.

ಬಿಡುಗಡೆ ಯಾವಾಗ?

ಸದ್ಯದ ಮಾಹಿತಿ ಪ್ರಕಾರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಐಫೋನ್ 18 ಪ್ರೊ ಜೊತೆಗೆ ಐಫೋನ್ ಫೋಲ್ಡ್ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಹಾಗಿದ್ದರೂ ಬಿಡುಗಡೆ ಬಗ್ಗೆ ಆ್ಯಪಲ್ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಫೋಲ್ಡಬಲ್ ಫೋನ್ ಮಾರುಕಟ್ಟೆ ಮೇಲೆ ಪರಿಣಾಮ ಏನು?

ಸ್ಯಾಮ್‌ಸಂಗ್ ಫೋಲ್ಡಬಲ್ ಫೋನ್ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. ಈಗ ಪ್ರತಿಸ್ಪರ್ಧಿ ಐಫೋನ್ ಫೋಲ್ಡ್ ಸಹ ಪರಿಣಾಮ ಬೀರಲಿದೆ ಎಂದೇ ಅಂದಾಜಿಸಲಾಗಿದೆ. ನಾವೀನ್ಯತೆಯ ವಿನ್ಯಾಸ, ಆ್ಯಪಲ್ ಬ್ರ್ಯಾಂಡ್ ಗ್ರಾಹಕರಿಗೆ ಹೊಸತನವನ್ನು ನೀಡಲಿದೆ. ಫೋಲ್ಡ್‌ ಫೋನ್‌ನಲ್ಲಿ ಕಂಡುಬಂದಿದ್ದ ಸಮಸ್ಯೆಗಳೆಲ್ಲವನ್ನೂ ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಐಫೋನ್ ಫೋಲ್ಡ್ ಆಗಮನಕ್ಕಾಗಿ ಗ್ಯಾಜೆಟ್ ಪ್ರೇಮಿಗಳು ಕಾತರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.