ADVERTISEMENT

Apple MacBook Pro: ನವೆಂಬರ್‌ 7ರಿಂದ ಖರೀದಿಗೆ ಲಭ್ಯ

ಪಿಟಿಐ
Published 31 ಅಕ್ಟೋಬರ್ 2023, 15:55 IST
Last Updated 31 ಅಕ್ಟೋಬರ್ 2023, 15:55 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಎಂ3 ಚಿಪ್‌ಸೆಟ್‌ ಹೊಂದಿರುವ ಆ್ಯಪಲ್‌ನ ಹೊಸ ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಟಾಪ್‌ ಮತ್ತು ಐಮ್ಯಾಕ್‌ ಪಿಸಿ ನವೆಂಬರ್ 7ರಿಂದ ಭಾರತವನ್ನೂ ಒಳಗೊಂಡು 27 ದೇಶಗಳಲ್ಲಿ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿಯು ತಿಳಿಸಿದೆ.

14 ಇಂಚು ಮತ್ತು 16 ಇಂಚು ಡಿಸ್‌ಪ್ಲೇ ಇರುವ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಬೆಲೆಯು ಕ್ರಮವಾಗಿ ₹1.69 ಲಕ್ಷ ಮತ್ತು ₹2.49 ಲಕ್ಷದಿಂದ ಆರಂಭ ಆಗುತ್ತದೆ.

ADVERTISEMENT

ಹೊಸ ಲ್ಯಾಪ್‌ಟಾಪ್‌ಗಾಗಿ ಸೋಮವಾರದಿಂದಲೇ ಬುಕಿಂಗ್ ಆರಂಭ ಆಗಿದೆ. ಆ್ಯಪಲ್‌ ಇಂಡಿಯಾ ಸ್ಟೋರ್‌ ಮತ್ತು ಆ್ಯಪಲ್‌ಸ್ಟೋರ್‌ ಆ್ಯಪ್‌ ಮೂಲಕ ಆರ್ಡರ್‌ ಮಾಡಬಹುದು ಎಂದು ತಿಳಿಸಿದೆ.

ಹೊಸ ಐಮ್ಯಾಕ್‌ ಡೆಸ್ಕ್‌ಟಾಪ್‌ 8–ಕೋರ್ ಜಿಪಿಯು ಹೊಂದಿದ್ದು ಬೆಲೆಯು ₹1.29 ಲಕ್ಷದಿಂದ ಆರಂಭ ಆಗುತ್ತದೆ. 10–ಜಿಪಿಯು ಇರುವ ಡೆಸ್ಕ್‌ಟಾಪ್‌ ಬೆಲೆಯು ₹1.44 ಲಕ್ಷದಿಂದ ಆರಂಭ ಆಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.