ADVERTISEMENT

AI Impact Summit: ಎಪ್‌ಸ್ಟೈನ್‌ ವಿವಾದ ಬೆನ್ನಲ್ಲೇ ಬಿಲ್ ಗೇಟ್ಸ್ ಗೈರು ಹಾಜರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 4:46 IST
Last Updated 19 ಫೆಬ್ರುವರಿ 2026, 4:46 IST
<div class="paragraphs"><p>ಬಿಲ್ ಗೇಟ್ಸ್</p></div>

ಬಿಲ್ ಗೇಟ್ಸ್

   

(ಪಿಟಿಐ ಚಿತ್ರ)

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 'ಎ.ಐ ಇಂಪ್ಯಾಕ್ಟ್ ಶೃಂಗ'ದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಬೀಟ್ಸ್ ಭಾಗವಹಿಸುವುದಿಲ್ಲ ಎಂದು ಗೇಟ್ಸ್ ಫೌಂಡೇಷನ್ ಸ್ಪಷ್ಟಪಡಿಸಿದೆ.

ADVERTISEMENT

ಗೇಟ್ಸ್ ಫೌಂಡೇಷನ್ ಅನ್ನು ಆಫ್ರಿಕಾ ಮತ್ತು ಭಾರತ ಕಚೇರಿಗಳ ಅಧ್ಯಕ್ಷ ಅಂಕುರ್ ವೋರಾ ಪ್ರತಿನಿಧಿಸಲಿದ್ದಾರೆ. ನಂತರ ಶೃಂಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಗೇಟ್ಸ್ ಫೌಂಡೇಷನ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಬಹಳಷ್ಟು ವಿಚಾರಗಳನ್ನು ಪರಿಗಣಿಸಿದ ಬಳಿಕ ಶೃಂಗದ ಮೇಲೆ ಗಮನ ಕೇಂದ್ರಿತವಾಗಿರಲು ಬಿಲ್ ಗೇಟ್ಸ್ ಭಾಷಣವನ್ನು ಮಾಡುವುದಿಲ್ಲ ಎಂದು ಹೇಳಿದೆ.

ಅದೇ ಹೊತ್ತಿಗೆ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಭಾರತದಲ್ಲಿ ಕೆಲಸ ಮಾಡುವುದರಲ್ಲಿ ಬದ್ಧವಾಗಿದೆ ಎಂದು ಹೇಳಿದೆ.

ಗೇಟ್ಸ್ ಗೈರು ಹಾಜರಿಗೆ ಕಾರಣ ಏನು?

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ಗೆ ಸಂಬಂಧಿಸಿದ ಫೈಲ್‌ಗಳಲ್ಲಿ ಗೇಟ್ಸ್ ಅವರ ಹೆಸರು ಕಾಣಿಸಿಕೊಂಡಿರುವುದರಿಂದ ಶೃಂಗಸಭೆಗೆ ಬಿಲ್ ಗೇಟ್ಸ್ ಹಾಜರಾಗುವುದಿಲ್ಲ ಎನ್ನಲಾಗಿದೆ.

ಭಾರತ ಮಂಟಪದಲ್ಲಿ ನಡೆಯುತ್ತಿರುವ ಎ.ಐ ಶೃಂಗದ ಮುಖ್ಯ ಭಾಷಣಕಾರರಲ್ಲಿ ಬಿಲ್ ಗೇಟ್ಸ್ ಹೆಸರು ಒಳಗೊಂಡಿತ್ತು. ಆದರೆ ಈಗ ಶೃಂಗದಲ್ಲಿ ಮಾತನಾಡುವವರ ಪಟ್ಟಿಯಿಂದ ಗೇಟ್ಸ್ ಹೆಸರನ್ನು ಕೈಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.