ADVERTISEMENT

'ಕ್ಲೌಡ್‌ಫ್ಲೇರ್' ಸರ್ವರ್ ಸಮಸ್ಯೆ; ಕೆಲ ಹೊತ್ತು ಇಂಟರ್‌ನೆಟ್ ಸೇವೆ ಸ್ಥಗಿತ

ಏಜೆನ್ಸೀಸ್
Published 5 ಡಿಸೆಂಬರ್ 2025, 10:13 IST
Last Updated 5 ಡಿಸೆಂಬರ್ 2025, 10:13 IST
<div class="paragraphs"><p>ಕ್ಲೌಡ್‌ಫ್ಲೇರ್</p></div>

ಕ್ಲೌಡ್‌ಫ್ಲೇರ್

   

ನವದೆಹಲಿ: 'ಕ್ಲೌಡ್‌ಫ್ಲೇರ್' ಸರ್ವರ್ ಸಮಸ್ಯೆಯಿಂದಾಗಿ ಜಾಗತಿಕವಾಗಿ ಇಂದು (ಶುಕ್ರವಾರ) ಡಿಜಿಟಲ್ ವೇದಿಕೆಗಳ ಇಂಟೆರ್‌ನೆಟ್ ಸೇವೆಯಲ್ಲಿ ಕೆಲ ಹೊತ್ತು ವ್ಯತ್ಯಯವಾಗಿತ್ತು.

ಕಳೆದ 20 ದಿನಗಳಲ್ಲಿ 2ನೇ ಸಲ 'ಕ್ಲೌಡ್‌ಫ್ಲೇರ್' ಸರ್ವರ್ ಸಮಸ್ಯೆಯಿಂದ ಇಂಟೆರ್‌ನೆಟ್ ಸೇವೆಯಲ್ಲಿ ವ್ಯತ್ಯಯವಾಗಿತ್ತು.

'ಕ್ಲೌಡ್‌ಫ್ಲೇರ್' ಸರ್ವರ್ ಸಮಸ್ಯೆಯಿಂದಾಗಿ ಜನಪ್ರಿಯ ಎಐ ಚಾಟ್ ಬಾಟ್ ವೇದಿಕೆಗಳಾದ ಚಾಟ್‌ಜಿಪಿಟಿ, ಪರ್ಪ್ಲೆಕ್ಸಿಟಿ ಜೊತೆಗೆ ಎಕ್ಸ್, ಕ್ಯಾನ್ವ, ಬುಕ್‌ಮೈಶೋ, ಲಿಂಕಡ್ಇನ್‌, ಸ್ಪೆಸ್‌ಎಕ್ಸ್‌ ಸೇರಿದಂತೆ ಪ್ರಮುಖ ಫ್ಲಾಟ್‌ಫಾರ್ಮ್‌ಗಳಲ್ಲಿ ಇಂಟರ್‌ನೆಟ್ ಸೇವೆಯಲ್ಲಿ ಸ್ಥಗಿತ ಉಂಟಾಗಿದೆ.

ಈ ಕುರಿತು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂಟರ್‌ನೆಟ್ ಮೂಲಸೌಕರ್ಯ ಕಂಪನಿಯಾದ ಕ್ಲೌಡ್‌ಫ್ಲೇರ್‌ನಲ್ಲಿ ಉಂಟಾದ ನೆಟ್‌ವರ್ಕ್ ವೈಫಲ್ಯದಿಂದ ಕೆಲವು ನಿಮಿಷಗಳವರೆಗೆ ಈ ದೋಷ ಕಂಡುಬಂದಿತ್ತು. ನಂತರ ಸರಿಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ 'ಕ್ಲೌಡ್‌ಫ್ಲೇರ್' ಸರ್ವರ್ ಸಮಸ್ಯೆ ಪರಿಹಾರವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.